23.2 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

ಬೆಳ್ತಂಗಡಿ : ಈಗಾಗಲೇ ಭಾರೀ ಮಳೆಯಿಂದಾಗಿ ತಾಲೂಕಿನ ಎಮ್.ಡಿ.ಆರ್ , ‍ಎಸ್.ಹೆಚ್ ಹಾಗೂ ಇನ್ನಿತರ ಮಾರ್ಗಗಳು ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ಓಡಾಡಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ನಿರ್ವಹಣೆ (maintenance work) ಇಲಾಖೆಯಿಂದ ಪ್ರಹಸನ ಪ್ರಾರಂಭವಾಗಿದೆ. ಇಲಾಖೆಗೆ ಬೇಕಾದ ಗುತ್ತಿಗೆದಾರರನ್ನು ಕರೆದು ಮುಂಗಡ (ಅಡ್ವಾನ್ಸ್ )ಆಗಿ ಚರಂಡಿ ದುರಸ್ತಿ, ಜಂಗಲ್ ಕಟ್ಟಿಂಗ್, ಹೊಂಡ ಮುಚ್ಚುವ ಕಾಮಗಾರಿಗಳನ್ನು ಯಾವುದೇ ಕರಾರು ಇಲ್ಲದೆ ಕ್ರಿಯಾಯೋಜನೆ ಇಲ್ಲದೆ ಅನುದಾನ ಇಲ್ಲದೆ ಪಿಡಬ್ಲ್ಯೂಡಿ ಯಲ್ಲಿ ಮಾಡಿಸುತ್ತಾರೆ. ಮುಂದೆ ಕ್ರಿಯಾಯೋಜನೆ ಅನುಮೋದನೆ (approval ) ಆಗಿ ಟೆಂಡರ್ ಆಗುತ್ತದೆ. ಟೆಂಡರ್ ನಲ್ಲಿ ಯಾವುದೇ ಗುತ್ತಿಗೆದಾರರು ಭಾಗವಹಿಸಬಹುದು. ಆವಾಗ ಮುಂಗಡ

(advance)ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಚೊಂಬೇ ಗತಿ. ಆದುದರಿಂದ ಮುಂಗಡ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ಆಲೋಚಿಸಿ. ಸರಕಾರದ ಪಾವತಿಯ ಬಗ್ಗೆ ಈಗಾಗಲೇ ಗುತ್ತಿಗೆದಾರರು ಪಡುವ ಬವಣೆಯನ್ನು ಯಾವುದೇ ಚುನಾಯಿತ ಪ್ರತಿನಿಧಿಯಾಗಲಿ ಇಲಾಖಾಧಿಕಾರಿಗಳಿಗಾಗಲಿ ಪರಿಜ್ಞಾನ ಇರುವುದಿಲ್ಲ. ಆದುದರಿಂದ ಗುತ್ತಿಗೆದಾರರೇ ಎಚ್ಚರ ಎಚ್ಚರ….
ನಮ್ಮನ್ನು ಕೇಳುವವರು ಯಾರೂ ಇಲ್ಲ. ಕಳೆದ ಹಲವಾರು ವರ್ಷಗಳಿಂದ ಮುಂಗಡ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ದೇವರೇ ಗತಿ….

  • ನೊಂದ ಗುತ್ತಿಗೆದಾರರು. ಎಂಬ ಪೋಸ್ಟ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

Related posts

ಕ್ರಿಕೆಟ್ ಪಂದ್ಯಾಟದ ಮೂಲಕ ಸಹಾಯನಿಧಿ ಸಂಗ್ರಹಿಸಿದ ಮಾರ್ನಿಂಗ್ ಫ್ರೆಂಡ್ಸ್ ಅನಾರೋಗ್ಯದಿಂದ ಬಳಲುತ್ತಿದ್ದ ಕೀರ್ತನ್ ಚಿಕಿತ್ಸೆಗೆ ರೂ.2.25 ಲಕ್ಷ ಹಸ್ತಾಂತರ

Suddi Udaya

ಉಜಿರೆ ಬೆನಕ ಆಸ್ಪತ್ರೆಗೆ ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ಭೇಟಿ

Suddi Udaya

ಬೆಳ್ತಂಗಡಿ: ಜ್ಯೋತಿ ಆಸ್ಪತ್ರೆಯಲ್ಲಿ ಜ್ಯೋತಿ ಆರೋಗ್ಯ ಕಾರ್ಡ್ ಬಿಡುಗಡೆ: ಕಳೆದ 19 ವರ್ಷಗಳಿಂದ ಉತ್ತಮ‌ ಸೇವೆಗೆ ಹೆಸರುವಾಸಿಯಾದ ಆಸ್ಪತ್ರೆ

Suddi Udaya

ಮದ್ದಡ್ಕ: ಬೈಕ್ ನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಕೆಎಸ್ ಆರ್ ಟಿಸಿ ಬಸ್ಸು

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ‘ಸಿರಿಧಾನ್ಯದಿಂದ ಆರೋಗ್ಯ ಸಿರಿ ‘ ಸಿರಿಧಾನ್ಯ ಜಾಗೃತಿ

Suddi Udaya

ಹಿರಿಯ ಮೀನು ವ್ಯಾಪಾರಿ, ಚಾರ್ಮಾಡಿ ಗ್ರಾ.ಪಂ ಮಾಜಿ ಸದಸ್ಯ ಜಿ.ಕೆ ಅಹ್ಮದ್‌ ಕುಂಞಿ(ಮೀನ್ ಮೋಣಾಕ) ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಿಧನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ