ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಘಟಕಗಳಿಗೆ ಭೇಟಿ

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಕೈಗಾರಿಕಾ ಘಟಕಗಳಿಗೆ ಭೇಟಿಯನ್ನು ನೀಡಲಾಯಿತು.

ಗರ್ಡಾಡಿಯಲ್ಲಿರುವ ದಿಯಾ ಇಂಪ್ರೆಶನ್ಸ್ ಪುಸ್ತಕ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕಾಗದ ತಯಾರಿಕೆಯಿಂದ ಬರೆಯಲು ಬೇಕಾದ ವಿವಿಧ ಪುಸ್ತಕ, ಪೇಪರ್ ಶೀಟ್ ಗಳ ತಯಾರಿಯನ್ನು ವಿವಿಧ ಹಂತಗಳಲ್ಲಿ ಘಟಕದ ಆಯೋಜಕರು ವಿವರವಾದ ಮಾಹಿತಿಯನ್ನು ನೀಡಿದರು.

ಉಜಿರೆಯಲ್ಲಿರುವ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿದಾಗ ವಸ್ತ್ರ ವಿನ್ಯಾಸದ ವಿವಿಧ ಮಜಲುಗಳನ್ನು ವಿವರಿಸಿ, ಒಂದು ಸಂಸ್ಥೆಯ ಆರಂಭದ ಉದ್ದೇಶ,ಲಾಭ ನಷ್ಟಗಳ ಪರಿಗಣನೆ, ಆರ್ಥಿಕ ಉತ್ತೇಜನ, ಉತ್ಪಾದಕರಿಗೆ ಯಾವ ರೀತಿಯಲ್ಲಿ ಪ್ರೋತ್ಸಾಹಿಸುವುದು, ವ್ಯವಹಾರದ ಸೂಕ್ಷ್ಮ ಅನುಭವಗಳನ್ನು ವಿದ್ಯಾರ್ಥಿಗಳು ಸಂಸ್ಥೆಯ ನಿರ್ದೇಶಕರಾದ ಶ್ರೀ ಯತೀಶ್ ಶೆಟ್ಟಿ ಇವರಿಂದ ಮಾಹಿತಿಯನ್ನು ಪಡೆದುಕೊಂಡರು .ಒಂದು ದಿನದ ಪ್ರಾಯೋಗಿಕ ಅಭ್ಯಾಸವನ್ನು ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಚಾಲಕರ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿಯವರ ಪ್ರೋತ್ಸಾಹದಿಂದ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಯಶಸ್ವಿಯಾಗಿ ನಡೆಸಿದರು. “ಕೋಶ ಓದು ದೇಶ ಸುತ್ತು” ಎಂಬಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷವಾದ ಅನುಭವವನ್ನು ಪಡೆದರು. ಈ ಕಾರ್ಯಕ್ರಮವು ಯಶಸ್ವಿಯಾಗಲು ಎಲ್ಲಾ ಅಧಿಕಾರಿಗಳ ಸಹಭಾಗಿತ್ವ, ಮಾರ್ಗದರ್ಶನ ಕಾರಣವಾಗಿದೆ.

Related posts

ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ: ರಕ್ಷಿತ್ ಶಿವರಾಂ

Suddi Udaya

ಪೆರ್ಲ-ಬೈಪಾಡಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ವಿಜಯ ಕುಮಾರ್ ಎಂ. ಕೊಯ್ಯೂರು ರವರಿಗೆ ಬೀಳ್ಕೊಡುಗೆ

Suddi Udaya

ಸವಣಾಲು ಅ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ; ಪ್ರತಿಭಾ ಪುರಸ್ಕಾರ

Suddi Udaya

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆ, ನೂರಾರು ಭಕ್ತರು ಭಾಗಿ

Suddi Udaya

ಮಚ್ಚಿನ ಸ.ಉ. ಹಿ.ಪ್ರಾ. ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸ್ಮಾರ್ಟ್ ಬೋರ್ಡ್ ಕೊಡುಗೆ

Suddi Udaya

ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!