ಬೆಳ್ತಂಗಡಿ : ಈಗಾಗಲೇ ಭಾರೀ ಮಳೆಯಿಂದಾಗಿ ತಾಲೂಕಿನ ಎಮ್.ಡಿ.ಆರ್ , ಎಸ್.ಹೆಚ್ ಹಾಗೂ ಇನ್ನಿತರ ಮಾರ್ಗಗಳು ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ಓಡಾಡಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ನಿರ್ವಹಣೆ (maintenance work) ಇಲಾಖೆಯಿಂದ ಪ್ರಹಸನ ಪ್ರಾರಂಭವಾಗಿದೆ. ಇಲಾಖೆಗೆ ಬೇಕಾದ ಗುತ್ತಿಗೆದಾರರನ್ನು ಕರೆದು ಮುಂಗಡ (ಅಡ್ವಾನ್ಸ್ )ಆಗಿ ಚರಂಡಿ ದುರಸ್ತಿ, ಜಂಗಲ್ ಕಟ್ಟಿಂಗ್, ಹೊಂಡ ಮುಚ್ಚುವ ಕಾಮಗಾರಿಗಳನ್ನು ಯಾವುದೇ ಕರಾರು ಇಲ್ಲದೆ ಕ್ರಿಯಾಯೋಜನೆ ಇಲ್ಲದೆ ಅನುದಾನ ಇಲ್ಲದೆ ಪಿಡಬ್ಲ್ಯೂಡಿ ಯಲ್ಲಿ ಮಾಡಿಸುತ್ತಾರೆ. ಮುಂದೆ ಕ್ರಿಯಾಯೋಜನೆ ಅನುಮೋದನೆ (approval ) ಆಗಿ ಟೆಂಡರ್ ಆಗುತ್ತದೆ. ಟೆಂಡರ್ ನಲ್ಲಿ ಯಾವುದೇ ಗುತ್ತಿಗೆದಾರರು ಭಾಗವಹಿಸಬಹುದು. ಆವಾಗ ಮುಂಗಡ
(advance)ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಚೊಂಬೇ ಗತಿ. ಆದುದರಿಂದ ಮುಂಗಡ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ಆಲೋಚಿಸಿ. ಸರಕಾರದ ಪಾವತಿಯ ಬಗ್ಗೆ ಈಗಾಗಲೇ ಗುತ್ತಿಗೆದಾರರು ಪಡುವ ಬವಣೆಯನ್ನು ಯಾವುದೇ ಚುನಾಯಿತ ಪ್ರತಿನಿಧಿಯಾಗಲಿ ಇಲಾಖಾಧಿಕಾರಿಗಳಿಗಾಗಲಿ ಪರಿಜ್ಞಾನ ಇರುವುದಿಲ್ಲ. ಆದುದರಿಂದ ಗುತ್ತಿಗೆದಾರರೇ ಎಚ್ಚರ ಎಚ್ಚರ….
ನಮ್ಮನ್ನು ಕೇಳುವವರು ಯಾರೂ ಇಲ್ಲ. ಕಳೆದ ಹಲವಾರು ವರ್ಷಗಳಿಂದ ಮುಂಗಡ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ದೇವರೇ ಗತಿ….
- ನೊಂದ ಗುತ್ತಿಗೆದಾರರು. ಎಂಬ ಪೋಸ್ಟ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.