April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಬೆಳಾಲು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಬಸ್ಸು ಪಾಸು ವಿತರಣೆ

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ, ಶಾಲಾ ವಿದ್ಯಾರ್ಥಿಗಳು ಬಸ್ ಪಾಸಿನ ಹಣದ ವೆಚ್ಚವನ್ನು ಪೂರ್ತಿಯಾಗಿ ಭರಿಸಿ, ವಿದ್ಯಾರ್ಥಿಗಳಿಗೆ ಉಚಿತ ಪಾಸಿನ ವಿತರಣೆಯನ್ನು ಮಾಡಲಾಯಿತು.


ಈ ಸಂಬಂಧವಾಗಿ ಜರಗಿದ ಸಭೆಯಲ್ಲಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲ, ಕಾರ್ಯದರ್ಶಿಗಳಾದ ಮಹಮ್ಮದ್ ಶರೀಫ್ ರವರು ಪಾಸನ್ನು ವಿತರಿಸಿ ಶುಭಹಾರೈಸಿದರು. ಉಜಿರೆ, ಓಡಲ, ಮಾಚಾರು, ನಾರ್ಯ, ಕಾಡಂಡ, ದೊಂಪದಪಲ್ಕೆ, ಮಾಯ ಈ ಭಾಗದಿಂದ ಬಸ್ಸಿನಲ್ಲಿ ಬರುವ 23 ಮಂದಿ ವಿದ್ಯಾರ್ಥಿಗಳು ಉಚಿತ ಪಾಸನ್ನು ಸ್ವೀಕರಿಸಿದರು.

ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಸ್ವಾಗತಿಸಿ ವಂದಿಸಿದರು. ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದರವರು ಕಾರ್ಯಕ್ರಮ ಸಂಯೋಜಿಸಿದರು.

Related posts

ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಭಾರತೀಯ ಮಜ್ದೂರು ಸಂಘದ ಜಿಲ್ಲಾದ್ಯಕ್ಷ ಅನಿಲ್ ಕುಮಾರ್ ಯು ಬೆಂಬಲ

Suddi Udaya

ಲಾಯಿಲ : ಸಿಂಧೂರ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ಕಕ್ಕಿಂಜೆ ರಸ್ತೆಯ ಮಧ್ಯೆ ಕೆಟ್ಟು ನಿಂತ ಲಾರಿ: ಒಂದು ಗಂಟೆಗಿಂತ ಅಧಿಕ ಕಾಲ ಟ್ರಾಫಿಕ್ ಜಾಮ್

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Suddi Udaya

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ : ಎಸ್.ಡಿ ಎಂ ಕಾಲೇಜಿನ ಬಾಲಕರ ತಂಡ ರಾಜ್ಯ ಮಟಕ್ಕೆ ಆಯ್ಕೆ

Suddi Udaya
error: Content is protected !!