ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಓ.ಟಿ.ಪಿ. ಪಡೆದು ಕೊಕ್ಕಡದ ಮಹಿಳೆಗೆ ರೂ.1.50ಲಕ್ಷ. ವಂಚನೆ

Suddi Udaya

ಕೊಕ್ಕಡ : ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಓ.ಟಿ.ಪಿ ಪಡೆದು ಮಹಿಳೆಯೊವ೯ರಿಗೆ ಅಪರಿಚಿತ ವ್ಯಕ್ತಿ ರೂ.1.50 ಲಕ್ಷ ವಂಚಿಸಿದ ಪ್ರಕರಣ ಜು. 26ರಂದು ವರದಿಯಾಗಿದೆ.
ಕೊಕ್ಕಡ ಗಾಣಗಿರಿ ಸುಶೀಲ ರವರ ಬ್ಯಾಂಕ್ ಖಾತೆಯಿಂದ ರೂ. 1.50 ಲಕ್ಷವನ್ನು ಅಪರಿಚಿತ ವ್ಯಕ್ತಿ ಎಗರಿಸಿದ್ದಾನೆ.
ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು , ಎಟಿಎಂ ಗಾಗಿ ಅಪ್ಲಿಕೇಶನ್ ಹಾಕಿದ್ದು 3-4 ದಿನದ ಹಿಂದೆ ಎಟಿಎಂ ಕಾರ್ಡ್ ಬಂದಿತ್ತು. ಇಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲರವರಿಗೆ ಫೋನ್ ಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಂಬಿಸಿ, ನಂತರ ಫೋನ್ ಮಾಡಿ ನಿಮಗೆ ಒಟಿಪಿ ಬಂದಿದೆ ನಂಬರ್ ಹೇಳಿ ಎಂದರು. ಅದರಂತೆ ಓಟಿಪಿ ನಂಬರ್ ಕೊಟ್ಟ ಸ್ವಲ್ಪ ಸಮಯದ ನಂತರ ಮಹಿಳೆ ಸುಶೀಲ ಅವರ ಖಾತೆಯಿಂದ ರೂ. 1.50 ಲಕ್ಷ ಡ್ರಾ ಆಗಿರುವುದು ಕಂಡು ಬಂದಿದೆ.
ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವಾರು ಗ್ರಾಹಕರು ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.

Leave a Comment

error: Content is protected !!