ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಬೆಳ್ತಂಗಡಿ:ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆಯು ಸರಕಾರಿ ಪ್ರೌಢ ಶಾಲೆ ಬೆಳ್ತಂಗಡಿಯಲ್ಲಿ ಜುಲೈ 26 ರಂದು ನಡೆಯುತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರಾ ಅಶೋಕ್ ವಹಿಸಿದ್ದರು.

ಬೆಳ್ತಂಗಡಿ ಸಾರ್ವಜನಿಕ ಆರೋಗ್ಯ ಇಲಾಖೆಯ ಶ್ರೂಶ್ರಕ ಸುಂದರ್ ಮತ್ತು ಅಮ್ಮಿ ಸಿಸ್ಟರ್ ಡೆಂಗ್ಯೂ ಜ್ವರದ ಗುಣಲಕ್ಷಣಗಳು ಹಾಗೂ ತಡೆಗಟ್ಟುವ ಬಗ್ಗೆ ಜಾಗೃತಿ ವಿಧಾನ ಮತ್ತು ಮಾಹಿತಿ ನೀಡಿದರು.

ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿಯನ್ನು ಮೇಜರ್ ಜನರಲ್ ಎಂ.ವಿ.ಭಟ್ ರವರು ನೀಡಿದರು.

ಮಹಿಳಾ ವೃಂದದ ವತಿಯಿಂದ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ವೃಂದದ ಸದಸ್ಯರಾದ ವೀಣಾ ವಿ ಕುಮಾರ್,
ರಜಿನಿ,ಉಮಾ ರಾವ್, ರಶ್ಮಿ ಪಟವರ್ಧನ್,ಜೆಸಿರೆಟ್ ಕೋ ಆರ್ಡಿನೇಟರ್ ಶೃತಿ ರಂಜಿತ್ ಉಪಸ್ಥಿತರಿದ್ದರು.

ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ.ನಿರೂಪಿಸಿದರು.
ಪ್ರೀತಿ ಆರ್ ರಾವ್ ವಂದಿಸಿದರು.

Leave a Comment

error: Content is protected !!