April 2, 2025
ಚಿತ್ರ ವರದಿ

ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ್ ದಿವಸ ಆಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕಾರ್ಗಿಲ್ ಯೋಧ ಮಾಜಿ ಸೈನಿಕ ಎನ್ ಆರ್ ತಂಗಚ್ಚನ್ ಧರ್ಮಸ್ಥಳ ಇವರು ಆಗಮಿಸಿದ್ದರು. ಕಾರ್ಗಿಲ್ ಹಾಗೂ ಅವರ ಸೈನ್ಯದ ಬಗ್ಗೆ ಸಿಹಿ ಕೈಗಳನ್ನು ಹಂಚಿಕೊಂಡರು. ಸೈನ್ಯದಲ್ಲಿ ಎದುರಾಳಿಗಳ ದಾಳಿಗಳನ್ನು ಪ್ರತಿಕ್ರಿಯಿಸಿದ ಅವರ ಜೀವನದ ಮಹತ್ವದ ಘಟನೆಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ವಿದ್ಯಾರ್ಥಿಗಳಲ್ಲಿ ಸೈನ್ಯಕ್ಕೆ ಸೇರುವಂತಹ ಆಶಾ ಮನೋಭಾವನೆಗಳನ್ನು ಇಟ್ಟುಕೊಂಡು ಜೀವನದಲ್ಲಿ ಸಾಗಬೇಕು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹಗಳನ್ನು ತುಂಬಿದರು. ನಮ್ಮ ದೇಶದ ರಕ್ಷಣೆ ನಮ್ಮದು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಬಿಂಬಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಮಡಿದಂತಹ ವೀರ ಯೋಧರನ್ನು ಸ್ಮರಿಸಿ, ಪುಷ್ಪವನ್ನು ಅರ್ಪಿಸಿ, ಮೌನ ಪ್ರಾರ್ಥನೆಯನ್ನು ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಮುಖ್ಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತ ರೋಡ್ರಿಗ್ರಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳು, ಭಾರತಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಬನ್ನಿ, ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಾಗತವನ್ನು ಗೈಡ್ ಕ್ಯಾಪ್ಟನ್ ಶ್ರೀಮತಿ ಕಾರುಣ್ಯ ಧನ್ಯವಾದಗಳು ಸ್ಕೌಟ್ ಮಾಸ್ಟರ್ ಮಂಜುನಾಥ್ ನೆರವೇರಿಸಿ ಕೊಟ್ಟರು . ನಿರೂಪಣೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ, ಭಾರತೀಯ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಶ್ರೀಮತಿ ಪ್ರಮೀಳಾ ನೆರವೇರಿಸಿ ಕಾರ್ಯಕ್ರಮವನ್ನು ಸಂಘಟಿಸಿದರು..

Related posts

ಬಂದಾರು: ಕಬಿಲಾಲಿ ನಿವಾಸಿ ರುಕ್ಮಯ ಗೌಡ ನಿಧನ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ: ಖಾಸಗಿ ಬಸ್ ನೌಕರರ ಸಂಘ ಜಿಲ್ಲಾ ಘಟಕದ ಉದ್ಘಾಟನೆ

Suddi Udaya

ಉಜಿರೆ: ಕಿರಣ್ ಆಗ್ರೋಟೆಕ್, ಸ್ಥಳಾಂತರಿತ ನೂತನ ಮಳಿಗೆ ಹಾಗೂ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಬಳಂಜ: ಇಂದು (ಮಾ.2) ಶ್ರೀ ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕ ಅಗೇಲು ಸೇವೆ

Suddi Udaya

ಉರುವಾಲು: ಉಂಡೆಮನೆ ಶಂಕರ ನಾರಾಯಣ ಭಟ್ ರವರ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya
error: Content is protected !!