September 6, 2026
ಗ್ರಾಮಾಂತರ ಸುದ್ದಿ

ನೆರಿಯ ಕುವೆತ್ತಿಲ್ ಎಂಬಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಎಂಬವರ ಮನೆಯ ಹಿಂಬದಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ,ಬಳಿಕ ಬೆಂಕಿ ಮನೆಗೆ ಆವರಿಸಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮನೆಯಲ್ಲಿ 4 ಜನರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದಕ್ಕೆ ಭೇಟಿ ನೀಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗುಲಿ ನಂತರ ಮನೆಯಲ್ಲಿದ್ದ ಪುಸ್ತಕ,ರಬ್ಬರ್ ಗೆ ಹೊತ್ತಿ ಉರಿದಿದೆ.

ಸ್ಥಳೀಯಯರಾದ ಆನಂದ್,ಆಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋದಾ, ಗೀತಾ,ರಮಾನಂದಶ ಮತ್ತಿತರರು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಬೆಂಕಿಯು ಮನೆಯ ಸುತ್ತಲೂ ಆವರಿಸಿದ ಕಾರಣ ಮನೆಗೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ

Related posts

ಗುರುವಾಯನಕರೆ ವ್ಯಾಪ್ತಿಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಇಂದಬೆಟ್ಟು: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರಿಂದ ಮನವಿ

Suddi Udaya

ಆಗಸ್ಟ್ 2 , 3: ಉಜಿರೆಯಲ್ಲಿ “ಮಹಿಳಾ ಯಕ್ಷ ಸಂಭ್ರಮ” : ಪತ್ರಿಕಾಗೋಷ್ಠಿ

Suddi Udaya

ಉಜಿರೆ: ಪಾಂಡುರಂಗ ಕಾಕತ್ಕರ್ ನಿಧನ

Suddi Udaya

ಎಲೆಚುಕ್ಕಿ ರೋಗದಿಂದ ರೈತರು ಹೈರಾಣಾಗಿದ್ದಾರೆ-ವಿಧಾನ ಪರಿಷತ್ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಬೊಟ್ಯಾಡಿ

Suddi Udaya
error: Content is protected !!