30.3 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ನೆರಿಯ: ಕುವೆತ್ತಿಲ್ ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಎಂಬವರ ಮನೆಯ ಹಿಂಬದಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ,ಬಳಿಕ ಬೆಂಕಿ ಮನೆಗೆ ಆವರಿಸಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮನೆಯಲ್ಲಿ 4 ಜನರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದಕ್ಕೆ ಭೇಟಿ ನೀಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗುಲಿ ನಂತರ ಮನೆಯಲ್ಲಿದ್ದ ಪುಸ್ತಕ,ರಬ್ಬರ್ ಗೆ ಹೊತ್ತಿ ಉರಿದಿದೆ.

ಸ್ಥಳೀಯಯರಾದ ಆನಂದ್,ಆಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋದಾ, ಗೀತಾ,ರಮಾನಂದಶ ಮತ್ತಿತರರು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಬೆಂಕಿಯು ಮನೆಯ ಸುತ್ತಲೂ ಆವರಿಸಿದ ಕಾರಣ ಮನೆಗೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Related posts

ಮೇಲಂತಬೆಟ್ಟು ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ: ಅಗ್ನಿಗುಳಿಗನ ಗಗ್ಗರ ಸೇವೆ

Suddi Udaya

ಕೊಕ್ಕಡ ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

Suddi Udaya

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಿಲ್ಪ್ರೇಡ್ ಫೆರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗೆ ಮೃತ್ಯು

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಬದಲಾವಣೆಯ ಕುರಿತು ಮಾಹಿತಿ

Suddi Udaya

ಡಿ.12: ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶತಚಂಡಿಕಾ ಯಾಗ, ಸಹಸ್ರನಾರಿಕೇಳ ಅಭಿಷೇಕ ಮತ್ತು ಶತರುದ್ರಾಭಿಷೇಕ

Suddi Udaya

ಮದ್ದಡ್ಕ ಲ್ಯಾನ್ಸಿ ರೋಡ್ರಿಗಸ್ ನಿಧನ

Suddi Udaya
error: Content is protected !!