ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

Suddi Udaya

ನೂತನ ಕುಲಾಲ ಮಂದಿರ ನಿರ್ಮಾಣಕ್ಕೆ ಪೂರ್ಣ ಸಹಕಾರ: ಕ್ಯಾ| ಬೃಜೇಶ್ ಚೌಟ

ನೂತನ ಕುಲಾಲ ಮಂದಿರ ನಿರ್ಮಾಣಕ್ಕೆ ಶಾಸಕ ನಿಧಿಯಿಂದ ರೂ. 30 ಲಕ್ಷ ಅನುದಾನ: ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಮತ್ತು ಕುಲಾಲ, ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟಿದ ಕೂಟ ಕಾರ್ಯಕ್ರಮ ಜು.28 ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಿತು.
ಸಮಾರಂಭದಲ್ಲಿ ನೂತನ ಸಂಸದರನ್ನು ಸಂಘದ ವತಿಯಿಂದ ಹಾಲು ಹೊದಿಸಿ ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಸಂಸದರು ರಾಷ್ಟ್ರೀಯ ಚಿಂತನೆಗೆ ಕುಲಾಲ ಸಮಾಜ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿದ್ದು, ಹಿಂದುತ್ವದ ಪರವಾಗಿರುವ ಈ ಸಮಾಜದ ನೂತನ ಕುಲಾಲ ಭವನ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಅವರ ಮಾತಿಗೆ ಬದ್ಧನಾಗಿ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಕುಲಾಲ ಸಮಾಜ ಹಿಂದೂ ಸಮಾಜಕ್ಕೆ ಶಕ್ತಿಯಾಗಿದ್ದು, ಕುಲಾಲ ಮಂದಿರದ ಅಭಿವೃದ್ಧಿಗೆ ಈಗಾಗಲೇ ರೂ. 5 ಲಕ್ಷ ಹಾಗೂ ರೂ.‌25 ಲಕ್ಷ ಅನುದಾನ ಒದಗಿಸಿದ್ದೇನೆ. ನೂತನ ಸಮುದಾಯ ಭವನ ನಿರ್ಮಾಣಕ್ಕೆ ರೂ. 1.50 ಕೋಟಿ ಅನುದಾನ ನೀಡುವುದಾಗಿ ನೀಡಿದ ಭರವಸೆಗೆ ಬದ್ಧನಾಗಿದ್ದು, ಈಗಾಗಲೇ ತನ್ನ ಶಾಸಕ ನಿಧಿಯಿಂದ ರೂ.30 ಲಕ್ಷ ಅನುದಾನ ಮೀಸಲಿರಿಸಿದ್ದೇನೆ. ಆಗಸ್ಟ್ ತಿಂಗಳಲ್ಲಿ ಇದರ ಶಿಲಾನ್ಯಾಸ ಮಾಡುವ ಎಂದು ತಿಳಿಸಿದರು.
ಬೆಳ್ತಂಗಡಿ ನೂತನ ಕುಲಾಲ ಭವನ ನಿರ್ಮಾಣಕ್ಕೆ ಸಂಸದರು ತಮ್ಮ ನಿಧಿಯಿಂದ ಅನುದಾನ ನೀಡಬೇಕು, ಜೊತೆಗೆ ಎಂ.ಆರ್.ಪಿ.ಎಲ್ ನಂತಹ ಕಂಪೆನಿಗಳ ಸಿ.ಆರ್.ಫಂಡ್ ನಿಂದ ಅನುದಾನ ಒದಗಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರಲ್ಲಿ ವಿನಂತಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ವಹಿಸಿದ್ದರು. ಕಾಯ೯ಕ್ರಮವನ್ನು
ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ನಿವೃತ್ತ ಬಿ.ಎಸ್.ಎಫ್ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸೋಮಯ್ಯ ಮೂಲ್ಯ ಹನೈನಡೆ, ಮಾಲಾಡಿ ಎಸ್.ಕೆ ಪೆಟ್ರೋಲಿಯಂ ಸಂಸ್ಥೆಯ ಮಾಲಕ ಉದಯಚಂದ್ರ ಎಂ.,
ಬಳೆಂಜ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್, ಕುಲಾಲ ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಕುಲಾಲ್, ಜಿಲ್ಲಾ ಯುವ ವೇದಿಕೆ ಕಾಯ೯ದಶಿ೯ ಲೋಕೇಶ್ ಕುಲಾಲ್ ಭಾಗವಹಿಸಿದ್ದರು.
ಸಮಾರಂಭದಲ್ಲಿ ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯಲ್ಲಿ ಡಿಸ್ಟಿಂಕ್ಷನ್ (ಶೇ 85 ಮತ್ತು ಅಧಿಕ ಅಂಕ) ಪಡೆದ ಸ್ವಜಾತಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಿತು.
ಸ್ವಾತಿ ಪಾಂಡೇಶ್ವರ ಇವರ ಪ್ರಾಥ೯ನೆ ಬಳಿಕ ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲು ಸ್ವಾಗತಿಸಿದರು. ಶಿಕ್ಷಕರಾದ ಜಗನ್ನಾಥ ಕುಲಾಲ್ ಮತ್ತು ಸತೀಶ್ ಬಂಗೇರ ಕಾಯ೯ಕ್ರಮ ನಿರೂಪಿಸಿದರು. ಪದ್ಮಕುಮಾರ್ ವಂದಿಸಿದರು.
ಸಂಘದ ಸದಸ್ಯರಾದ, ತಿಲಕ್ ರಾಜ್ ಕುಲಾಲ್ ಕಂಚಿಂಜ, ಹರೀಶ್ ಮೂಲ್ಯ ನಾರಾವಿ, ಪ್ರವೀಣ್ ಕುಲಾಲ್ ಬರಾಯ, ಮೋಹನ್ ಕುಲಾಲ್ ಕಂಚಿಂಜ, ಹರಿಶ್ಚಂದ್ರ ಕುಲಾಲ್ ಪಾಂಡೇಶ್ವರ, ಸಂಜೀವ ಕುಲಾಲ್ ಬೆಳ್ತಂಗಡಿ, ಗಣೇಶ್ ಕುಲಾಲ್ ಗುರುವಾಯನಕೆರೆ, ದಯಾನಂದ ಕುಲಾಲ್ ಅಂಡಿಂಜೆ, ಸಂಘದ ಮೆನೇಜರ್ ಮುಖೇಶ್ ಕುಲಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Leave a Comment

error: Content is protected !!