ಬೆಳ್ತಂಗಡಿ: ಮುಂಡಾಜೆ ಸಮೀಪದ ಸೀಟು ಬಳಿ ತಂದೆ ಮತ್ತು ಮಗಳು ಸಂಚರಿಸುತ್ತಿದ್ದ ಬೈಕ್‌ಗೆ ಜು. 27ರಂದು ಬೊಲೆರೊ ವಾಹನ ಹಿಂಬದಿಯಿಂದ ಢಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿದ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅಗತ್ಯ ಪರಿಹಾರಗಳನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ಚಿತ್ಪಾವನ ಸಂಘಟನೆ ವತಿಯಿಂದ ಅಧ್ಯಕ್ಷ ತ್ರಿವಿಕ್ರಮ್ ಹೆಬ್ಬಾರ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರರಿಗೆ ಜು.29ರಂದು ಸೋಮವಾರ ಮನವಿ ಸಲ್ಲಿಸಲಾಯಿತು.
ಜು.25 ರಂದು ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಅವರು ಮುಂಡಾಜೆಯ ತನ್ನ ಮನೆಗೆ ಹೋಗುತ್ತಿರುವ ಸಂದರ್ಭ ಹಿಂದಿನಿಂದ ಬಂದು ಬೊಲೇರೋ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಪುತ್ರಿ ಉಜಿರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯಾ(10ವ) ಮೇಲೆ ಬೊಲೆರೋ ವಾಹನ ಚಲಿಸಿದ ಪರಿಣಾಮ ಬಾಲಕಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವಾಗ ಮೃಟಪಟ್ಟಿದ್ದರು. ಬಾಲಕಿಯ ತಂದೆ ಗುರುಪ್ರಸಾದ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.