April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಆಟಿದ ಕೂಟ

ಮುಂಡಾಜೆ : ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ವತಿಯಿಂದ ಜು.28 ರಂದು ಮುಂಡಾಜೆ ಪಂಚಾಯತ್ ಭವನದಲ್ಲಿ ಆಟಿದ ಕೂಟ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಗರಿ ರಾಮಣ್ಣ ಶೆಟ್ಟಿ, ಮುಂಡ್ರುಪಾಡಿ ವಿಶ್ವನಾಥ ಶೆಟ್ಟಿ ಮತ್ತು ವನಿತಾ ಶೆಟ್ಟಿ, ಅಧ್ಯಕ್ಷರು ಉಜಿರೆ ವಲಯ ಬಂಟರ ಸಂಘ ಇವರು ದೀಪ ಬೆಳಗಿಸಿ ಮತ್ತು ಚೆಣ್ಣೆ ಮಣೆ ಆಡಿ ನೆರವೇರಿಸಿದರು.

ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ಆಟಿದ ದಿನದ ಮಹತ್ವದ ಬಗ್ಗೆ ತಿಳಿಸಿದರು.

ಪ್ರಸಾದ್ ಶೆಟ್ಟಿ ಮಂಜುಶ್ರೀ ನಗರ ಮತ್ತು ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ವಿವಿಧ ಭಕ್ತಿ ಸುಗಿಪು ಹಾಡುಗಳು ಮತ್ತು ಸಂದಿ ಪಾಡ್ದನಗಳನ್ನು ಹಾಡಿದರು. ಬಳಿಕ ತುಳುನಾಡ ಸಿರಿ ಎಂಬ ಯಕ್ಷಗಾನ ತಾಳಮದ್ದಲೆ ಯನ್ನು ಗ್ರಾಮದ ಬಂಟ ಕಲಾವಿದರು ನೆರವೇರಿಸಿದರು. ಗ್ರಾಮ ಸಮಿತಿಯ ಸದಸ್ಯರು ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳನ್ನು ತಂದು ಶಿವರಾಜ್ ರೈ ಸೋಮಂತಡ್ಕ ಇವರ ಮನೆಯಲ್ಲಿ ಭೋಜನ ಕೂಟ ವನ್ನು ಏರ್ಪಡಿಸಿದರು. ಗ್ರಾಮ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.

ಜೊತೆ ಕಾರ್ಯದರ್ಶಿ ನವೀನ್ ಶೆಟ್ಟಿ ಇವರು ನಿರೂಪಿಸಿ,ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ವಂದಿಸಿದರು.

Related posts

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನದಡಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ಕಳಿಯ : ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಾವಿನಕಾಯಿಯನ್ನು ಹೋಲುವ ಕೋಳಿ ಮೊಟ್ಟೆ

Suddi Udaya

ಧರ್ಮಸ್ಥಳ: ನೇರ್ತನೆ ನಿವಾಸಿ ಸ್ಟ್ಯಾನಿ ಜೋಸೆಫ್ ನಿಧನ

Suddi Udaya

ಬೆಳ್ತಂಗಡಿ ತರಬೇತಿ ಕೇಂದ್ರದ ವಾರ್ಷಿಕ ವರದಿ ಬಿಡುಗಡೆ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya
error: Content is protected !!