30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೊಲೇರೋ ವಾಹನ ಡಿಕ್ಕಿ ಹೊಡೆದು ಬಾಲಕಿ ಅನರ್ಘ್ಯಾ ಸಾವನ್ನಪ್ಪಿದ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳ್ತಂಗಡಿ ಚಿತ್ಪಾವನ ಸಂಘಟನೆ ವತಿಯಿಂದ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಮುಂಡಾಜೆ ಸಮೀಪದ ಸೀಟು ಬಳಿ ತಂದೆ ಮತ್ತು ಮಗಳು ಸಂಚರಿಸುತ್ತಿದ್ದ ಬೈಕ್‌ಗೆ ಜು. 27ರಂದು ಬೊಲೆರೊ ವಾಹನ ಹಿಂಬದಿಯಿಂದ ಢಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿದ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅಗತ್ಯ ಪರಿಹಾರಗಳನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ಚಿತ್ಪಾವನ ಸಂಘಟನೆ ವತಿಯಿಂದ ಅಧ್ಯಕ್ಷ ತ್ರಿವಿಕ್ರಮ್ ಹೆಬ್ಬಾರ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರರಿಗೆ ಜು.29ರಂದು ಸೋಮವಾರ ಮನವಿ ಸಲ್ಲಿಸಲಾಯಿತು.


ಜು.25 ರಂದು ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಅವರು ಮುಂಡಾಜೆಯ ತನ್ನ ಮನೆಗೆ ಹೋಗುತ್ತಿರುವ ಸಂದರ್ಭ ಹಿಂದಿನಿಂದ ಬಂದು ಬೊಲೇರೋ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಪುತ್ರಿ ಉಜಿರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯಾ(10ವ) ಮೇಲೆ ಬೊಲೆರೋ ವಾಹನ ಚಲಿಸಿದ ಪರಿಣಾಮ ಬಾಲಕಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವಾಗ ಮೃಟಪಟ್ಟಿದ್ದರು. ಬಾಲಕಿಯ ತಂದೆ ಗುರುಪ್ರಸಾದ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮ

Suddi Udaya

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ಜಿಲ್ಲಾ ಉಸ್ತುವಾರಿ ಸಚಿವರಿಂದ138 ಫಲಾನುಭವಿಗಳಿಗೆ 94ಸಿ ಮತ್ತು ‌94 ಸಿಸಿ ಹಕ್ಕು ಪತ್ರ ವಿತರಣೆ

Suddi Udaya

ರವಿ ಕಕ್ಕೆಪದವು ರವರಿಗೆ ತೆರೆಮರೆಯ ನಾಯಕ ಪುರಸ್ಕಾರ

Suddi Udaya

ಉಜಿರೆಯ ರವೀಂದ್ರ ನಾಯಕ್ ನಿಧನ

Suddi Udaya

ಪ್ರಥಮ ತಾಲೂಕು ಅಧಿವೇಶನಕ್ಕೆ ಸಜ್ಜಾಗುತಿದೆ ಬೆಳ್ತಂಗಡಿ ಅಭಾಸಾಪ: ಡಿ.22 ರಂದು ಬಲಿಪ ರೆಸಾರ್ಟಿನಲ್ಲಿ ಅಧಿವೇಶನ

Suddi Udaya
error: Content is protected !!