29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

ಬೆಳ್ತಂಗಡಿ : ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊ ಜು.28ರಂದು ಡಾ. ಬಿ. ಆರ್. ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ತುಳುನಾಡು ಒಕ್ಕೂಟ ಸಂಘಟನೆಯ ವತಿಯಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುತ್ತೊಟ್ಟು ಫಿನ್ ಕಾರ್ಪ್ ಮೂಡಬಿದ್ರೆ ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಮತಿ ಮಲ್ಲಿಕಾ ಪುನೀತ್ ಇವರು ಮಾತನಾಡಿ ತುಳುನಾಡಿನ ಪಾರಂಪರಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದು ಎಲ್ಲಾ ತುಳುವರ ಕರ್ತವ್ಯವಾಗಿದೆ. ಮಕ್ಕಳಿಗೆ ಪಾರಂಪರಿಕ ಚೆನ್ನೆಮಣೆ ಆಟವನ್ನು ಕಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ತುಳು ನಾಟಕ ರಚನೆಕಾರ ಮತ್ತು ರಂಗನಿರ್ದೇಶಕ ವಿ. ಎನ್. ಕುಲಾಲ್ ವೇಣೂರು, ವಕೀಲರಾದ ಅನಿಲ್ ಕುಮಾರ್ ಯು., ರಾಜೀವ್ ಕಕ್ಕೆ ಪದವು, ಜಯಾನಂದ ಬಂಗೇರ ಕುವೆತ್ಯಾರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ತುಳುನಾಡ್ ಒಕ್ಕೂಟ ಸಂಘಟನೆಯ ಉಪಾಧ್ಯಕ್ಷರಾದ ನವೀನ್ ಪೂಜಾರಿ ಅಡ್ಕದಬೈಲು, ತುಳುನಾಡ್ ಒಕ್ಕೂಟ ಸಂಘಟನೆಯ ಜಿಲ್ಲಾಧ್ಯಕ್ಷರಾದ ಉದಯ ಗೋಳಿಯಂಗಡಿ ಗೌರವ ಉಪಸ್ಥಿತರಿದ್ದರು. ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಕುಲಾಲ್ ಬೈರೊಟ್ಟು ಅಧ್ಯಕ್ಷತೆ ವಹಿಸಿದ್ದರು.


ಬೆಳಿಗ್ಗೆಯಿಂದ ನಡೆದ ಸಂಧಿ ಪಾರ್ದನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀಮತಿ ಹೊನ್ನಮ್ಮ, ಎರಡನೇ ಬಹುಮಾನ ಅವನಿ, ಮೂರನೇ ಬಹುಮಾನ ಶಿಫಾನಿ ಪಡೆದರು.

ಚೆನ್ನೆಮಣೆ ಆಟದ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಅವನಿ, ಎರಡನೇ ಬಹುಮಾನ ಶಿವಾಣಿ, ಮೂರನೇ ಬಹುಮಾನ ಸುಪ್ರಿತಾ ರಾವ್, ನಾಲ್ಕನೇ ಬಹುಮಾನ ಶ್ರಾವ್ಯ ಪಡೆದರು.

ಚೆನ್ನೆಮಣೆ ಆಟದ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಸಂಜೀವ, ಎರಡನೇ ಬಹುಮಾನ ಪ್ರವೀಣ್, ಮೂರನೇ ಬಹುಮಾನ ಜಿ. ವಿ. ಹರೀಶ್ ಸವಣಾಲು ಮತ್ತು ಮನೋಹರ್ ಜಂಟಿಯಾಗಿ ಪಡೆದರು. ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಸಮಾರೋಪ ಸಮಾರಂಭದಲ್ಲಿ ನೀಡಲಾಯಿತು. ರಮೇಶ್ ಸಾಲಿಯಾನ್ ಅರಳಿ ಸ್ವಾಗತಿಸಿ, ಆಕಾಶ್ ಪೂಜಾರಿ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬೇಟಿ

Suddi Udaya

ಮುಂಡಾಜೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

“ಅಯ್ಯಪ್ಪ ಸ್ವಾಮಿಯ “108” ಶರಣುಘೋಷವನ್ನು 58 ಸೆಕೆಂಡಿನಲ್ಲಿ ಹೇಳಿದ ಉಜಿರೆಯ ಉದಯ್ ಎ.ಕೆ ಆಚಾರ್ಯ ರವರಿಗೆ “ಇಂಡಿಯಾ ಬುಕ್ ಆಫ್ ರೇಕಾರ್ಡ್”, ಕಲಾಂಸ್ ವರ್ಲ್ಡ್ ರೇಕಾರ್ಡ್, ಇಲೈಟ್ ಬುಕ್ ಆಫ್ ರೇಕಾರ್ಡ್”

Suddi Udaya

ಬಿಜೆಪಿ‌ ಅಲ್ಪಸಂಖ್ಯಾತ ಮೋರ್ಚಾದಿಂದ ಶಾಸಕರ ಹುಟ್ಟುಹಬ್ಬ ಆಚರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ

Suddi Udaya

ಶಿಬಾಜೆ: ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ತೆಗೆದು ಹಾಕಿ ಅಡಿಕೆಕೊಂಡು ಹೋದ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

Suddi Udaya
error: Content is protected !!