ಬೆಳ್ತಂಗಡಿ : ಕರ್ನಾಟಕ ರಾಜ್ಯ ಟ್ಯೆಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ನಡೆದ ಆಟಿಡೊಂಜಿ ದಿನ ವಿಶೇಷ ಉಪನ್ಯಾಸ ನೀಡಿದ ಡಾ.ರವೀಶ್ ಪಡುಮಲೆಯವರು ಹಿಂದಿನ ನಮ್ಮ ಹಿರಿಯ ಕಷ್ಟದ ಬದುಕನ್ನು ಇಂದು ನಾವು ಆಟಿಡೊಂಜಿ ದಿನದ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದೇವೆ. ತುಳುನಾಡಿನ ಆಚಾರ ವಿಚಾರಗಳ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ವೃತ್ತಿ ಜೀವನದ ಗೌರವದೊಂದಿಗೆ ನಮ್ಮ ಕಿರಿಯರಿಗೆ ನಾಡಿನ ಆಚಾರ-ವಿಚಾರಗಳನ್ನು ಮನವರಿಕೆ ಮಾಡುವುದು, ಸ್ವಸ್ಥ ಸಮಾಜದ ನಿರ್ಮಾಣ ಮತ್ತು ಉಳಿಸುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಡಾ.ರವೀಶ್ ಪಡುಮಲೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ವೇದಾವತಿ , ಜಯಂತ್ ಉರ್ಲಾಂಡಿ, ಶಾಂಭವಿ ಪಿ ಬಂಗೇರ, ಜಯಲಾಕ್ಷ, ಕುಶಾಲಪ್ಪ ಗೌಡ, ನಾಗೇಶ್ ಉಜಿರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿ ತಿಂಡಿ ತಿನಿಸುಗಳೊಂದಿಗೆ ಟೈಲರ್ಸ್ ವೃತ್ತಿ ಭಾಂದವರು ಸಹ ಭೋಜನದಲ್ಲಿ ಭಾಗಿಯಾದರು.