24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ: ಶ್ರೀ ಶಾಸ್ತಾರ ದೇವರ ಗರ್ಭ ಗುಡಿಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ ರೂ.3 ಲಕ್ಷ ಮೊತ್ತದ ಡಿಡಿ ಹಸ್ತಾಂತರ

ಕಳೆಂಜ ಶ್ರಿ ಸದಾಶಿವೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಶಾಸ್ತಾರ ದೇವರ ಗರ್ಭ ಗುಡಿಯ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ರೂ. 3 ಲಕ್ಷ ಮೊತ್ತದ ಡಿಡಿ ಯನ್ನು ಯೋಜನಾಧಿಕಾರಿಯವರಾದ ಸುರೇಂದ್ರ ರವರು ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಧರ ರಾವ್ ರವರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಕುಸುಮಾಕರ, ಕೊಕ್ಕಡ ಜೆಸಿಐ ಅಧ್ಯಕ್ಷ ಸಂತೋಷ್ ಜೈನ್, ಕಳೆಂಜ ಬಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ, ಸೇವಾಪ್ರತಿನಿಧಿ ಕುಮಾರಿ ಭವಾನಿ ಹಾಗು ಒಕ್ಕೂಟದ ಪದಾಧಿಕಾರಿಗಳು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಮೇಲಂತಬೆಟ್ಟು ಗ್ರಾ.ಪಂ. ಮಹಿಳಾ ಗ್ರಾಮ ಸಭೆ

Suddi Udaya

‍ಚಂದ್ರಯಾನ -3 ಯಶಸ್ಸಿನಲ್ಲಿ ಹಿರಿಯ ವಿಜ್ಞಾನಿ ಧರ್ಮಸ್ಥಳದ ಪಿ. ವಾಸುದೇವ ರಾವ್ ಸೇವೆ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ 68 ಫಲಾನುಭವಿಗಳಿಗೆ ನೀರಿನ ಬ್ಯಾರಲ್ ವಿತರಣೆ

Suddi Udaya

ಬಿಜೆಪಿ ಧರ್ಮಸ್ಥಳದ ಶಕ್ತಿಕೇಂದ್ರದ ಪ್ರಮುಖ್ ಹರ್ಷಿತ್ ಜೈನ್ ಹಾಗೂ ವಿಕ್ರಮ್ ಆಯ್ಕೆ

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರುವಂದನಾ” ಕಾರ್ಯಕ್ರಮ

Suddi Udaya
error: Content is protected !!