28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೆಎಸ್‌ಎಮ್‌ಸಿಎ ಸಂಘಟನೆಗೆ ನೂತನ ನಿರ್ದೇಶಕರಾಗಿ ರೆ.ಫಾ. ಆದರ್ಶ್ ಜೋಸೆಫ್ ಪುದಿಯೆಡತ್ ನೇಮಕ

ಬೆಳ್ತಂಗಡಿ; ಇಲ್ಲಿನ ಧರ್ಮಪ್ರಾಂತ್ಯದ ಸಂಘಟನೆಯಾದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್, (ಕೆ ಎಸ್ ಎಂ ಸಿ ಎ (ರಿ) ಇದರ ನೂತನ ನಿರ್ದೇಶಕರಾಗಿ ರೆ. ಫಾ. ಆದರ್ಶ್ ಜೋಸೆಫ್ ಪುತಿಯೇಡತ್ ಇವರನ್ನು ಬೆಳ್ತಂಗಡಿ ಧರ್ಮಧ್ಯಕ್ಷ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಇವರು ನೇಮಕ ಮಾಡಿದ್ದಾರೆ.

ಅತ್ಯಂತ ಉತ್ಸಾಹಿ ಸಂಘಟಕರಾದ ಫಾ. ಆದರ್ಶ್ ಅವರು ಕೆ ಎಸ್ ಎಂ ಸಿ ಎ ನಿರ್ದೇಶಕರಾಗಿ ನೇಮಕವಾಗಿರುವುದರಿಂದ ಸಂಘಟನೆಯ ಕಾರ್ಯಕರ್ತ ರಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಹಾಗೂ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಗುರುಗಳ ನೇಮಕಾತಿಯನ್ನು ಸ್ವಾಗತ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ನೂತನ ನಿರ್ದೇಶಕರಾಗಿರುವ ಫಾ. ಆದರ್ಶ್ ಅವರು ಸದ್ಯ ಗುತ್ತಿಗಾರು, ನೆಟ್ಟಣ ಧರ್ಮ ಕೇಂದ್ರಗಳ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya

ಅನಂತ ಚತುರ್ದಶಿ ವ್ರತಾಚರಣೆಯ ಮಹತ್ವ

Suddi Udaya

ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

Suddi Udaya

ಕಾಜೂರು ದರ್ಗಾ ಹಾಗೂ ರಹ್ಮಾನಿಯಾ ಮಸ್ಜಿದ್ ನಲ್ಲಿ ಈದ್ ಆಚರಣೆ

Suddi Udaya

ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರದಲ್ಲಿ ದಾರಂದ ಪ್ರತಿಷ್ಠೆ: ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya
error: Content is protected !!