ಬೆಳ್ತಂಗಡಿ: ದಕ್ಷಿಣ ಕಾಶಿ ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯಲ್ಲಿ ಇಂದು ರಾತ್ರಿ 8.10 ಗಂಟೆಗೆ ನೇತ್ರಾವರಿ ಮತ್ತು ಕುಮಾರಧಾರ ನದಿಗಳು ಸಂಗಮವಾಗಿದ್ದು, ದೇವಸ್ಥಾನದ ಅರ್ಚಕರು ಜಲ ಪೂಜೆಯನ್ನು ನೆರವೇರಿಸಿದರು.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿರುವ ಕಾರಣ ಮತ್ತು ಕುಮಾರಧಾರ ನದಿ ತುಂಬಿ ಹರಿಯುವುದರಿಂದ ಸಂಗಮ ಕ್ಷೇತ್ರ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ಕಡೆಗಳಲ್ಲಿ ಹರಿಯು ನದಿಗಳು ಸಂಗಮವಾಗಿ ಕೆಲದಿನಗಳಿಂದ ಸಂಗಮಕ್ಕಾಗಿ ಕಾಯುತ್ತಿದ್ದ ಭಕ್ತರು ಪುಳಕಿತಗೊಂಡು ಸಂಗಮ ಸ್ನಾನ ಮಾಡಿ ಪುಣಿತರಾದರು.