April 2, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸವಣಾಲು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಕಾರು: ಚಾಲಕ ಪ್ರಾಣಪಾಯದಿಂದ ಪಾರು

ಬೆಳ್ತಂಗಡಿ: ಚಲಿಸುತ್ತಿದ್ದ ಕಾರು ಮನೆಯ ಮೇಲೆ ಬಿದ್ದ ಘಟನೆ ಜು.30 ರಂದು ಸವಣಾಲಿನ ಹೇರಾಜೆಯಲ್ಲಿ ನಡೆದಿದೆ.

ಹೇರಾಜೆಯ ರಘುರಾಮ್ ಗಾಂಭೀರ ಅವರ ಮನೆಯ ಮೇಲೆ ಸವಣಾಲು ರಸ್ತೆಯಲ್ಲಿ ಸಾಗುತ್ತಿದ್ದ ಕಾರು 20 ಅಡಿ ಆಳದಲ್ಲಿ ಇದ್ದ ಮನೆ ಮೇಲೆ ಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮನೆಯ ಗೋಡೆಗೆ ಹಾನಿಯಾಗಿದ್ದು ಕಾರು ಸಂಪೂರ್ಣವಾಗಿ ಜಖಂ ಆಗಿದೆ. . ಇನ್ನು ಇದೇ ವೇಳೆ ಈ ರಸ್ತೆಯಲ್ಲಿ ಸಾಕಷ್ಟು ಜನ ಹಾಲು ತೆಗೆದುಕೊಂಡು ಹೋಗುತ್ತಿರುತ್ತಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.

ಸದ್ಯ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related posts

ಚಾರ್ಮಾಡಿ ಘಾಟ್: ರಸ್ತೆಗೆ ಬಿದ್ದ ಮರ, ಸಂಚಾರ ತಾತ್ಕಾಲಿಕ ಸ್ಥಗಿತ

Suddi Udaya

ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮ ನಿಧಿ ಉಜಿರೆಯ ಉದ್ಯಮಿ, ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರಿಂದ 50 ಸಾವಿರ ದೇಣಿಗೆ ಹಸ್ತಾಂತರ

Suddi Udaya

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಸಚಿವ ಮಾಂಕಾಳ್ ಎಸ್. ವೈದ್ಯ ಭೇಟಿ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ಜೆಸಿಐ ಮಡಂತ್ಯಾರು ವಿಜಯ 2024 ರ ಶಾಶ್ವತ ಯೋಜನೆಗಳ ಆನಾವರಣ

Suddi Udaya
error: Content is protected !!