ಬಳಂಜ: ಜಡಿಮಳೆಗೆ ಉಕ್ಕಿ ಹರಿಯುತ್ತಿರುವ ಫಲ್ಗುಣಿ ನದಿ: ಅಡಿಕೆ ತೋಟಗಳು, ಕೃಷಿಗಳು ಜಲಾವೃತ, ಕಂಗಾಲಾದ ರೈತರು,

Suddi Udaya

ಬಳಂಜ: ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ನದಿಗಳು ತುಂಬಿ ಹರಿಯುತ್ತಿದೆ. ಪಶ್ಚಿಮ ಘಟ್ಟದಿಂದ ಹರಿದು ಬರುತ್ತಿರುವ ಫಲ್ಗುಣಿ ನದಿ ಕೂಡ ತುಂಬಿ ಹರಿಯುತ್ತಿದ್ದು ಕಾಪಿನಡ್ಕ, ಬಳಂಜ, ಪೆರಾಜೆ, ಹಚ್ಚಾಡಿ, ಕೊಂಗುಲ ಭಾಗದಲ್ಲಿ ನದಿ ಆಕರ್ಷಿಸುತ್ತಿದೆ.

ಬಳಂಜ ಹೊಸಮನೆಯ ನಿವಾಸಿ, ನಿವೃತ್ತ ಅಂಚೆ ಮಾಸ್ಟರ್ ಬಿ.ಪ್ರಮೋದ್ ಕುಮಾರ್ ಜೈನ್, ಕೊಂಗುಳ ವಸಮನತ ಪೂಜಾರಿ,ಯೋಗೀಶ್ ಪೂಜಾರಿ ಹಾಗೂ ಇತರ ಕಡೆಗಳಲ್ಲಿ ಅಡಿಕೆ ತೋಟಕ್ಕೆ ನೀರು ನುಗ್ಗಿ ಇಡೀ ಪ್ರದೇಶ ಜಲಾವೃತಗೊಂಡು ಕೃಷಿ ಹಾನಿಯಾಗಿದೆ.

ಬದಿನಡೆ ನಾಗಬ್ರಹ್ಮ ದೇವಸ್ಥಾನದ ಪರಿಸರದಲ್ಲೂ ನೀರು ತುಂಬಿದ್ದು ಡೆಂಜೋಲಿ ಪರಿಸರದ ನದಿ ಪಾತ್ರದ ಜನರ ಕೃಷಿ ತೋಟಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ.

Leave a Comment

error: Content is protected !!