ಮೊಗ್ರು: ನೈಮಾರ್, ಪರಾರಿ, ದoಬೆತ್ತಿಮಾರು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು: ಅಪಾರ ಕೃಷಿ ಹಾನಿ

Suddi Udaya

ಮೊಗ್ರು : ಜು 30 ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಸ್ಥಾನದ ಹಿಂಭಾಗದ ನೈಮಾರ್, ಪರಾರಿ, ದoಬೆತ್ತಿಮಾರು ಪರಿಸರದ ಸುಮಾರು 20 ಮನೆಯವರ ತೋಟಕ್ಕೆ ಸತತವಾಗಿ 15 ದಿನಗಳಿಂದ ಸುರಿದ ವಿಪರೀತ ಮಳೆಯಿಂದಾಗಿ ನೇತ್ರಾವತಿ ನದಿ ಸಂಪರ್ಕದ ತೋಡಿನ ನೀರು ಮತ್ತು ಕೆಸರು ಮಣ್ಣು ತೋಟಕ್ಕೆ ನುಗ್ಗಿ ಅಡಿಕೆ, ತೆಂಗು ಇನ್ನಿತರ ಬೆಳೆಗಳ ಸ್ಥಿತಿಯ ಬಗ್ಗೆ ಆ ಭಾಗದ ಕೃಷಿಕರು ಆತಂಕ ದಲ್ಲಿದ್ದು ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ತೋಟದ ಮೇಲ್ಬಾಗದಲ್ಲಿ ಸಂಪೂರ್ಣ ಕೆಸರು ಮಣ್ಣು ನಿಂತು ಕೃಷಿಕರಿಗೆ ಭಯ ಭೀತಿ ಉಂಟಾಗಿದೆ.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ಮಾಹಿತಿ ಪಡೆದುಕೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


2019 ನೇ ಇಸವಿಯಲ್ಲಿ ಈ ಭಾಗದ ಕೃಷಿಕರಿಗೆ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು, ಪರಿಹಾರ ಪಡೆಯುವಲ್ಲಿ ವಂಚಿತರಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಹಾರ ನೀಡಬೇಕಾಗಿ ಆತಂಕದಲ್ಲಿರುವ ಕೃಷಿಕರ ಒಕ್ಕೊರಲ ಆಗ್ರಹವಾಗಿದೆ.

Leave a Comment

error: Content is protected !!