April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ ಕರ್ಮಂದೊಟ್ಟು ಧರೆ ಕುಸಿದು ಅಪಾಯದಲ್ಲಿರುವ ಕೆಲವು ಮನೆಗಳಿಗೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭೇಟಿ,

ಬಳಂಜ: ಕಳೆದ ಕೆಲ ಸಮಯದಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಕರ್ಮಂದೊಟ್ಟು ಪರಿಸರದಲ್ಲಿ ಧರೆ ಜರಿದು ಪ್ರವಾಹ ಎದುರಾಗಿದ್ದು ಸಂತ್ರಸ್ಥ ಗ್ರಾಮಸ್ಥರಿಗೆ ಬಳಂಜ ಗ್ರಾಮ ಪಂಚಾಯತ್ ನಲ್ಲಿ ತಾತ್ಕಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಬಳಂಜ ಗ್ರಾಮ ಪಂಚಾಯತ್ ಗೆ ಬೆಳ್ತಂಗಡಿ ತಹಶಶೀಲ್ದಾರ್ ಪೃಥ್ವಿ ಸಾನಿಕಾಮ್ ಹಾಗೂ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಸಂತ್ರಸ್ತರಿಂದ ಹಾಗೂ ಬಳಂಜ ಗ್ರಾ.ಪಂ ಪಿಡಿಓ ಅವರಿಂದ ಮಾಹಿತಿ ಪಡೆದರು.

ಸಂತ್ರಸ್ಥರಾದ ಉಸ್ಮಾನ್, ಚಂದ್ರಹಾಸ, ಆನಂದ ಆಚಾರ್ಯ, ತಾಹಿರಾ ನಮಗೆ ಬದಲಿ ನಿವೇಶನ ಅಗತ್ಯವಾಗಿ ಬೇಕಾಗಿದೆ.ನಿವೇಶನ ಆಗುವ ತನಕ ನಾವು ಬೇರೆ ಕಡೆಗೆ ಸ್ಥಳಾಂತರವಾಗುವುದಿಲ್ಲ ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ನಷ್ಟಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತಹಶೀಲ್ದಾರ್ ಅವರು ನಿಯಾಮನುಸಾರ ಯಾವ ರೀತಿ ನಿವೇಶನ ನೀಡಬಹುದು ಅದರಂತೆ ಬದಲಿ ನಿವೇಶನ ನೀಡುವ ಭರವಸೆ ನೀಡಿದರು.ನಂತರ ಅಪಾಯದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಾಲ್ಕು ಕುಟುಂಬದಲ್ಲಿ 16 ಸದಸ್ಯರಿದ್ದು ಅದರಲ್ಲಿ 5 ಸಣ್ಣ ಮಕ್ಕಳಿದ್ದಾರೆ.

ಈ ಸಂದರ್ಭದಲ್ಲಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಕಂದಾಯ ನೀರಿಕ್ಷಕರಾದ ಕುಮಾರಸ್ವಾಮಿ, ಗ್ರಾಮಕರಣಿಕ ರಫೀಕ್ ಎನ್, ಬಳಂಜ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರು, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಮತ್ತು ನಿರ್ದೇಶಕರು, ಊರ ಪ್ರಮುಖರು, ಗ್ರಾಮಸ್ಥರು ಇದ್ದರು.

Related posts

ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಉಚಿತ ಯೋಗ ಶಿಕ್ಷಣ ತರಗತಿ ಉದ್ಘಾಟನೆ

Suddi Udaya

ಅ.13: ಯಕ್ಷಭಾರತಿ ಕನ್ಯಾಡಿ ಸಂಸ್ಥೆಯ ವತಿಯಿಂದ ಕನ್ಯಾಡಿಯಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ ಶಿಬಿರ

Suddi Udaya

ಕನ್ಯಾಡಿ: ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಹನುಮಾನ್ ರಥೋತ್ಸವ

Suddi Udaya

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆ

Suddi Udaya

ಬೆಳ್ತಂಗಡಿ: ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದರ ಕಡಿತ ಮಾರಾಟ: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

Suddi Udaya
error: Content is protected !!