24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ ಕರ್ಮಂದೊಟ್ಟು ಪರಿಸರದಲ್ಲಿ ಧರೆ ಕುಸಿತ: ಅಪಾಯದಲ್ಲಿ ಕೆಲವು ಮನೆಗಳು, ಬಳಂಜ ಗ್ರಾ.ಪಂ. ನಲ್ಲಿ ತಾತ್ಕಾಲಿಕ ವ್ಯವಸ್ಥೆ, 4 ಕುಟುಂಬಗಳು, 16 ಜನ ಸ್ಥಳಾಂತರ

ಬಳಂಜ: ಕಳೆದ ಕೆಲ ಸಮಯದಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಕರ್ಮಂದೊಟ್ಟು ಪರಿಸರದಲ್ಲಿ ಧರೆ ಜರಿದು ಪ್ರವಾಹ ಎದುರಾಗಿದ್ದು ಸಂತ್ರಸ್ಥ ಗ್ರಾಮಸ್ಥರಿಗೆ ಬಳಂಜ ಗ್ರಾಮ ಪಂಚಾಯತ್ ನಲ್ಲಿ ತಾತ್ಕಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಬಳಂಜ ಗ್ರಾಮದ ಕರ್ಮಂದೊಟ್ಟು ಪರಿಸರದ ಉಸ್ಮಾನ್, ಚಂದ್ರಹಾಸ, ಆನಂದ ಆಚಾರ್ಯ, ತಾಹಿರಾ ಮನೆಗಳು ಅಪಾಯದ ಪರಿಸ್ಥಿತಿಯಲ್ಲಿದ್ದು ಈ ಕುಟುಂಬವನ್ನು ಬಳಂಜ ಗ್ರಾಮ ಪಂಚಾಯತ್ ನ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ಕು ಕುಟುಂಬದಲ್ಲಿ 16 ಸದಸ್ಯರಿದ್ದು ಅದರಲ್ಲಿ 5 ಸಣ್ಣ ಮಕ್ಕಳಿದ್ದಾರೆ.

ಈ ಪರಿಸರಕ್ಕೆ ಬಳಂಜ ಗ್ರಾ.ಪಂ. ಅಧ್ಯಕ್ಷೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸದಸ್ಯರು , ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಕೊಕ್ಕಡ ಗ್ರಾ.ಪಂ. ನಲ್ಲಿ ಉದ್ಯೋಗಕಾತರಿ ಯೋಜನೆಯಡಿ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬಳಂಜ ಜ್ಯೋತಿ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ ಸಭೆ: ಅಧ್ಯಕ್ಷರಾಗಿ ಚೇತನಾ ಜೈನ್, ಪ್ರ.ಕಾರ್ಯದರ್ಶಿಯಾಗಿ ಯಕ್ಷಿತಾ ದೇವಾಡಿಗ

Suddi Udaya

ಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಪಾತ್ರೆ ಕೊಡುಗೆ

Suddi Udaya

ಕಣಿಯೂರು: ಮಲ್ಲಿಗೆ ಕೃಷಿ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು : ಪೆರ್ದಾಡಿಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ

Suddi Udaya
error: Content is protected !!