ತೆಂಕಕಾರಂದೂರು:ಆರೋಗ್ಯ ಸಮಸ್ಯೆಯಿಂದ ಬಳಲಿ ಗುಣಮುಖರಾಗುತ್ತಿರುವ ಗಿಂಡಾಡಿ ಗುರುರಾಜ್ ಹೆಗ್ಡೆಯವರಿಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೂ. 50 ಸಾವಿರ ವೈದ್ಯಕೀಯ ನೆರವನ್ನು ನೀಡಲಾಯಿತು.
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಅವರು ಗುರುರಾಜ್ ಹೆಗ್ಡೆಯವರ ತಾಯಿಗೆ ರೂ. 50 ಸಾವಿರದ ಚೆಕ್ ಹಸ್ತಾಂತರಿಸಿದರು.
ಕಳೆದ ಕೆಲ ತಿಂಗಳುಗಳ ಹಿಂದೆ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದ ಗುರುರಾಜ್ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು. ಆ ಚಿಕಿತ್ಸೆಗೆ ಸುಮಾರು ರೂ 50 ಲಕ್ಷಕಿಂತ ಹೆಚ್ಚು ಖರ್ಚು ಬೇಕಾಗಿದ್ದು, ಊರವರು, ಹಲವಾರು ಸಂಘ ಸಂಸ್ಥೆಗಳು,ಮಿತ್ರರು ಸೇರಿ ಮೊತ್ತವನ್ನು ಕ್ರೋಡಿಕರಿಸಿದ್ದರು. ಅದರಂತೆ ಅಳದಂಗಡಿ ಸಿಎ ಬ್ಯಾಂಕಿನಿಂದ ವೈದ್ಯಕೀಯ ನೆರವು ನೀಡಲಾಯಿತು. ಇದೀಗ ಗುರುರಾಜ್ ಹೆಗ್ಡೆಯವರು ಗುಣಮುಖರಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ.
ಈ ಸಂದರ್ಭದಲ್ಲಿ ಅಳದಂಗಡಿ ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೀರಾ,ಉಪಾಧ್ಯಕ್ಷ ಜನಾರ್ಧನ ಪೂಜಾರಿ,ನಿರ್ದೇಶಕರಾದ ಗುರುಪ್ರಸಾದ್ ಹೆಗ್ಡೆ,ದೇಜಪ್ಪ ಪೂಜಾರಿ,ದಿನೇಶ್ ಪಿ.ಕೆ,ದೇವಿಪ್ರಸಾದ್ ಶೆಟ್ಟಿ, ಕೊರಗಪ್ಪ,ಹೇಮಂತ್,ಸುಂದರಿ,ಧರ್ಣಪ್ಪ,ವಿಶ್ವನಾಥ ಹೊಳ್ಳ, ಮಮತಾ,ಉಪಸ್ಥಿತರಿದ್ದರು