ಗರ್ಡಾಡಿ: ತಾಲೂಕಿನಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಡಾಡಿ ಗ್ರಾಮದ ಹಳ್ಳಿಂಜಬೀಡು ಪರಿಸರದಲ್ಲಿ ಮಣ್ಣು ಕುಸಿದು ಮನೆಗೆ ಭಾಗಶಃ ಹಾನಿಯಾಗಿದೆ.
ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬುಧವಾರ ರಾತ್ರಿ ಏಕಾಏಕಿ ಮಣ್ಣು ಕುಸಿದು ಮನೆಗೆ ಬಿದ್ದಿದೆ. ಪರಿಣಾಮ ಪ್ರವೀಣ್ ಪೂಜಾರಿಯವರ ಮನೆ ಭಾಗಶಃ ಹಾನಿಯಾಗಿದೆ.
ರಾತ್ರಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮನೆಯ ಗೋಡೆ ಮಣ್ಣಿನದಾಗಿದ್ದು ಮಣ್ಣು ಬಿದ್ದ ರಭಸಕ್ಕೆ ಗೋಡೆಗಳು ಬಿದ್ದಿವೆ.
ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಸುವರ್ಣ ಅವರು ರಾತ್ರಿ 4 ಗಂಟೆಗೆ ಬಂದು ಮನೆಯ ಸಾಮಾಗ್ರಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಇಗಾಗಲೇ ಸಂಬಂದ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ.