24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಣಕಜೆಯ ಅರ್ಕಜೆ ಬಳಿ ಮನೆಗೆ ಗುಡ್ಡ ಕುಸಿದು ಹಾನಿ: ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರಿಂದ ಮಣ್ಣು ತೆರವು ಕಾರ್ಯ

ಸೋಣಂದೂರು: ಪಣಕಜೆಯ ಅರ್ಕಜೆ ಎಂಬಲ್ಲಿ ಶ್ರೀಮತಿ ಕುಸುಮಾವತಿ ಎಂಬುವವರ ಮನೆಗೆ ಗುಡ್ಡ ಕುಸಿದು ಮನೆಯ ಮುಂಭಾಗ ಮಣ್ಣಿನಿಂದ ಸಂಪೂರ್ಣ ಮುಚ್ಚಿ ಹೋಗಿತ್ತು.

ವಿಷಯ ತಿಳಿದು ತಕ್ಷಣ ಸ್ಪಂದಿಸಿದ ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಸಹಕರಿಸಿದರು.

ದೊಡ್ಡ ಮಟ್ಟದ ಮಣ್ಣು ಕುಸಿದು ಭಾರೀ ಪ್ರಮಾಣದ ಮಣ್ಣು ತುಂಬಿದ್ದು, ಸಂಪೂರ್ಣ ತೆರವು ಅಸಾಧ್ಯ ವಾಗಿರುತ್ತದೆ. ತಾತ್ಕಾಲಿಕವಾಗಿ ಮುಂಭಾಗದ ಮಣ್ಣು ತೆರವುಗೊಳಿಸಲಾಯಿತು.

ವಲಯ ಮೇಲ್ವಿಚಾರಕರಾದ ಶ್ರೀಮತಿ ಯಶೋಧರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇವಾಪ್ರತಿನಿಧಿ ಶ್ರೀಮತಿ ಜಾನಕಿ, ಮಡಂತ್ಯಾರು ವಲಯ ಶೌರ್ಯ ಸಂಯೋಜಕಿ ಶ್ರೀಮತಿ ಹರಿಣಾಕ್ಷಿ, ಘಟಕ ಪ್ರತಿನಿಧಿ ಬಾಲಕೃಷ್ಣ ಹಾರಬೆ,ಸ್ವಯಂ ಸೇವಕರಾದ ಭರತ್ ಕುಮಾರ್, ದಯಾನಂದ ಹಚ್ಚಬೆ, ಯೋಗೀಶ್ ಕೊಡ್ಲಕ್ಕೆ, ಶ್ರೀಮತಿ ಶೋಭಾ, ಬೇಬಿ ವಡ್ಡ, ಸತೀಶ್ ಆಚಾರ್ಯ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Related posts

ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ತೆರಿಗೆಯ ಹೆಸರಿನಲ್ಲಿ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ: ಪ್ರತಾಪಸಿಂಹ ನಾಯಕ್

Suddi Udaya

ರೆಖ್ಯ: ನಾಪತ್ತೆಯಾಗಿದ್ದ ಉರ್ನಡ್ಕ ನಿವಾಸಿ ಲೋಕೇಶ್ ರವರ ಮೃತದೇಹ ಪತ್ತೆ

Suddi Udaya

ಬೆಳ್ತಂಗಡಿ ತಾ| ಕಚೇರಿಯ ನಿವೃತ್ತ ಉಪತಹಶೀಲ್ದಾರ್ ನಿಡ್ಲೆ ಚೆನ್ನಪ್ಪ ಗೌಡ ನಿಧನ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲಿಗೆ ಲಾರಿ ಡಿಕ್ಕಿ: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ

Suddi Udaya

ಪಟ್ರಮೆ: ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಅಪಘಾತ

Suddi Udaya
error: Content is protected !!