23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳರವರಿಗೆ ಸೇವಾ ನಿವೃತ್ತಿ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳ ಜು.31ರಂದು ಸೇವಾ ನಿವೃತ್ತಿ ಹೊಂದಿದರು.

ಉಜಿರೆ ಗ್ರಾಮದ ನಡಿಬೆಟ್ಟು ನಿವಾಸಿ ನಿರುಪಮ ನಾರಾಯಣ ಹೊಳ್ಳ ದಂಪತಿಯ ಪ್ರಥಮ ಪುತ್ರರಾದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಉಜಿರೆ ಶ್ರೀ ಧ.ಮ. ಶಾಲೆಯಲ್ಲಿ ಮುಗಿಸಿ, 1982 ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟಗಾರರಾಗಿ ಕೆಲಸಕ್ಕೆ ಸೇರ್ಪಡೆಯಾಗಿ, ನಂತರ ಗುಮಾಸ್ತರಾಗಿ, ಮಾರಾಟ ವ್ಯವಸ್ಥಾಪಕರಾಗಿ ಸಂಘದ ಎಲ್ಲಾ ವಿಭಾಗಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸವನ್ನು ನಿರ್ವಹಿಸಿರುತ್ತಾರೆ.

ನಂತರ 2013ರಿಂದ ಸಂಘದ ಲೆಕ್ಕಿಗರಾಗಿ, 2013ರಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಸ್ತುತ 2021 ಮೇ10 ರಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಸಂಘದಲ್ಲಿ ಸುದೀರ್ಘ 42 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸತೀಶ್ ಹೊಳ್ಳರವರು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ

ಇವರು ಪತ್ನಿ ನಳಿನಿ ಹೊಳ್ಳ, ಪುತ್ರ ನರೇಶ್, ಪುತ್ರಿ ಶರಣ್ಯ ರೊಂದಿಗೆ ಜೀವನ ನಡೆಸುತ್ತಿದ್ದಾರೆ.

Related posts

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿ ಕ್ಷಿತಿಜ್ ಶೆಟ್ಟಿ ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ಮಹಾ ಯೋಜನೆ: ಬೆಳ್ತಂಗಡಿ ಪಟ್ಟಣ ಪಂಚಾಯತನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಯೋಜನೆಯ ನಿಯಮಗಳನ್ನು ಅನ್ವಯಿಸದಂತೆ ಕ್ರಮ ತೆಗೆದುಕೊಳ್ಳಲು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಆಗ್ರಹ: ನಗರಾಭಿವೃದ್ದಿ ಸಚಿವರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಮಸ್ಯೆ ಪರಿಹರಿಸುವ ಭರವಸೆ

Suddi Udaya

ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್; ಅಧ್ಯಕ್ಷರಾಗಿ ಅಶ್ರಫ್ ಆಲಿಕುಂಞಿ ಪುನರಾಯ್ಕೆ

Suddi Udaya

ಮಹಾಶಿವರಾತ್ರಿಯ ಪ್ರಯಕ್ತ: ಫೆ.15,16 ರಂದು ಕೆ.ಎಸ್.ಆರ್ ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಭಗೀರಥ ಜಿ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ಚಂದ್ರ ಡಿ.ಕೆ ಆಯ್ಕೆ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya
error: Content is protected !!