25.7 C
ಪುತ್ತೂರು, ಬೆಳ್ತಂಗಡಿ
March 7, 2026
ಸಮಸ್ಯೆ

ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಾನಿಗೊಳಗಾದ ಪ್ರದೇಶಕ್ಕೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ

ಬೆಳ್ತಂಗಡಿ :ಹಲವು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಪ್ರದೇಶಗಳಾದ ಸೋಣಂದೂರು ಗ್ರಾಮದ ಅರ್ಕಜೆ, ಓಡಿಲ್ನಾಳ ಗ್ರಾಮದ ಬಟ್ಟೆಮಾರ್, ಪಡಂಗಡಿ, ಸವಣಾಲು ಗ್ರಾಮದ ಬಾಡಡ್ಕ, ಲಾಯಿಲ ಗ್ರಾಮದ ಕತ್ಪಾಜೆ, ಕುತ್ಲೂರು ಗ್ರಾಮದ ಅತ್ರಿಜಾಲು, ಮರೋಡಿ ಗ್ರಾಮದ ದೇರಾಜೆಬೆಟ್ಟ ಹಾಗೂ ಮೇಲಂತಬೆಟ್ಟುವಿನ ಹಲವು ಕಡೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಎಂ. ಪಾರೆಂಕಿ, ಜಯಾನಂದ ಗೌಡ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

Related posts

ಕಾಪಿನಬಾಗಿಲು: ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಕೆಡವಿದ ಅಧಿಕಾರಿಗಳು

Suddi Udaya

ಭೀಕರ ಮಳೆಯಿಂದಾಗಿ ಮುಂಡ್ರುಪ್ಪಾಡಿ ಪರಿಸರದ ತೋಟಕ್ಕೆ ನುಗ್ಗಿದ ನೀರು: ಕೊಚ್ಚಿ ಬಂದ ಮರದ ದಿಮ್ಮಿಗಳು

Suddi Udaya

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ನಾಲ್ಕೂರು: ಭಾರಿ ಮಳೆಗೆ ಕುರೆಲ್ಯ ರಾಜೇಂದ್ರ ಶೆಟ್ಟಿಯವರ ಮನೆಗೆ ಬರೆ ಕುಸಿದು ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಭೇಟಿ

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಪಶ್ಚಿಮ ಘಟ್ಟದ ಎಲ್ಲ ಅರಣ್ಯ ಒತ್ತುವರಿ ಮತ್ತು ಅನಧಿಕೃತ ಹೋಮ್ ಸ್ಟೇ, ಬಡಾವಣೆ, ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಅರಣ್ಯ ಸಚಿವರಿಂದ ಖಡಕ್ ಸೂಚನೆ

Suddi Udaya
error: Content is protected !!