ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಉಜಿರೆ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರಿಗೆ ರೂ. 2.72 ಲಕ್ಷ ವಂಚನೆ

ಬೆಳ್ತಂಗಡಿ: ದುಬೈ ಮೂಲದ ಆಲ್ ಜಬೇರ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮೂಲದ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರವರಿಂದ ಹಂತ ಹಂತವಾಗಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಘಟನೆ ಜು.31 ರಂದು ನಡೆದಿದೆ.

ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ಸಟೆನಿ ಅಲ್ಪೋನ್ಸ್‌ ಕರ್ಡೋಜ್ (64 ವರ್ಷ)ಎಂಬವರು ಈ ಹಿಂದೆ ವಿದೇಶದಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು, ಕಳೆದ 4.5 ವರ್ಷದಿಂದ ಊರಿನಲ್ಲಿಯೇ ಇದ್ದವರು ಫೇಸ್ಬುಕ್ ಜಾಲತಾಣದ ಲಿಂಕ್ ಮುಖಾಂತರ ದುಬೈ ಮೂಲದ ಆಲ್ ಜಬೇರ್ (al jaber) ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ಇರುವುದನ್ನು ಸತ್ಯ ಎಂದು ನಂಬಿ, ಲಿಂಕ್ ಮೂಲಕ ಅಪರಿಚಿತ ಕಂಪನಿಯ HRA ಅಧಿಕಾರಿ ಎಂದು ನಂಬಿಸಿ, ನಂತರ ಪಿರ್ಯಾದುದಾರರು ಆತನ ಮೊಬೈಲ್ ನಂಬ್ರ ಪಡೆದುಕೊಂಡು, ಆತನೊಂದಿಗೆ ವಾಟ್ಸಾಪ್ ಮೂಲಕ ಸಂವಹನ ಬೆಳೆಸಿದಾಗ ಪ್ರಾರಂಭಿಕ ಖರ್ಚು ಎಂದು ಅಲ್ಪೋನ್ಸ್‌ ಕರ್ಡೋಜ್ ನಂಬಿಸಿ ಅಲ್ಪೋನ್ಸ್‌ ಕರ್ಡೋಜ್ ರಿಂದ ಅಪರಿಚಿತನ ಬ್ಯಾಂಕ್ ಖಾತೆಗೆ ಜು. 24 ರಿಂದ ಜು.31 ರವರೆಗೆ ಹಂತ ಹಂತವಾಗಿ ರೂ. 2,72,621/- ಮೊತ್ತ ನಗದನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅಲ್ಪೋನ್ಸ್‌ ಕರ್ಡೋಜ್ ಮೋಸ ಹೋಗಿರುವ ಬಗ್ಗೆ ತಿಳಿದು, ನಂಬಿಸಿ ಮೋಸ ಮಾಡಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 77/2024 ಕಲಂ: 318(2), 318(4) ಭಾರತೀಯ ನ್ಯಾಯ ಸಂಹಿತೆ ಮತ್ತು 67(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಕುಮಾರ್ ಗೆ ಗೌರವ

Suddi Udaya

ಮಣಿನಾಲ್ಕೂರು: ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಮಕ್ಕಳ ರಜಾ ಶಿಬಿರ 2025: ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೊಂದಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಜೂ.30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಭಿಯಾನ ಆರಂಭ

Suddi Udaya

ನಾಲ್ಕೂರು: ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯ ರಾಶಿಪೂಜೆ

Suddi Udaya
error: Content is protected !!