September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಹಾಗೂ ಎಲ್.ಪಿ.ಜಿ/ಸಿ.ಎನ್.ಜಿ. ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಎದುರಿಸುತ್ತಿರುವ ಗಂಭೀರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಮೋಟಾರ್ ಮತ್ತು ಜನರಲ್ ಮಜ್ದೂರು ಸಂಘ (ಬಿಎಂಎಸ್) ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಮನವಿಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ವಹಿಸಿದ್ದರು. ಇತ್ತೀಚಿನ ಜಾಗತಿಕ ಪರಿಸ್ಥಿತಿ ಹಿನ್ನೆಲೆ ಇಂಧನದ ಬೆಲೆ ಏರಿಕೆ ಹಾಗೂ LPG/CNG ಗ್ಯಾಸ್ ಅಭಾವವು ರಿಕ್ಷಾ ಕಾರ್ಮಿಕರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂಧನ ವೆಚ್ಚ, ವಾಹನ ನಿರ್ವಹಣಾ ಖರ್ಚು, ಇನ್ಸುರನ್ಸ್ ಹಾಗೂ ಸ್ಪೇರ್ ಪಾರ್ಟ್ಸ್ ವೆಚ್ಚಗಳ ಹೆಚ್ಚಳದಿಂದ, ಪ್ರಸ್ತುತ ಇರುವ ಬಾಡಿಗೆ ದರಗಳಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಹಿನ್ನೆಲೆ ರಿಕ್ಷಾ ಬಾಡಿಗೆ ದರವನ್ನು ತಕ್ಷಣ ಪರಿಷ್ಕರಿಸುವುದು, LPG/CNG ಗ್ಯಾಸ್ ಸರಬರಾಜನ್ನು ಸುಧಾರಿಸುವುದು ಹಾಗೂ ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ಅವರು ಎಲ್ಲಾ ರಿಕ್ಷಾ ಬಂಧುಗಳ ಪರವಾಗಿ ಸಮಸ್ಯೆಗಳ ಗಂಭೀರತೆಯನ್ನು ಜಿಲ್ಲಾಧಿಕಾರಿಯವರಿಗೆ ವಿವರವಾಗಿ ಒತ್ತಿಹೇಳಿದರು. ರಿಕ್ಷಾ ಚಾಲಕರು ಎದುರಿಸುತ್ತಿರುವ ದಿನನಿತ್ಯದ ಸಂಕಷ್ಟಗಳು, ಆದಾಯ-ಖರ್ಚಿನ ಅಸಮತೋಲನ, ಗ್ಯಾಸ್ ಅಭಾವದಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ಬಾಡಿಗೆ ದರ ಪರಿಷ್ಕರಣೆಯ ಅಗತ್ಯತೆಯನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಯಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರಾದ ದರ್ಶನ್ ಎಚ್ ವಿ ಅವರು ಮನವಿಗೆ ಸ್ಪಂದಿಸಿ, ಒಂದು ವಾರದ ಒಳಗಾಗಿ ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಉಪಾಧ್ಯಕ್ಷರಾದ ರೋಹಿತಾಶ್ವ, ನಾರಾಯಣ ಪೂಜಾರಿ, ಜಿಲ್ಲೆಯ ಆಯಾಯ ತಾಲೂಕಿನ ಪದಾಧಿಕಾರಿಗಳಾದ ಹೇಮಂತ್ (ಪುತ್ತೂರು), ಸಚಿನ್ (ಪುತ್ತೂರು), ಸೀತಾರಾಮ್ (ಪುತ್ತೂರು), ಪ್ರಕಾಶ್ (ಸುಳ್ಯ), ರವಿ (ಸುಳ್ಯ), ಕರುಣಾಕರ ಗೌಡ (ಸುಳ್ಯ), ಶ್ರೀಕಾಂತ್ (ಬಂಟ್ವಾಳ), ಪರಮೇಶ್ವರ್, ನವೀನ್ (ಬಂಟ್ವಾಳ), ಸತೀಶ್ (ಬಂಟ್ವಾಳ), ದಿನೇಶ್ (ಬಂಟ್ವಾಳ), ಸುರೇಶ್ (ಬಂಟ್ವಾಳ) ಹಾಗೂ ವಿವಿಧ ತಾಲೂಕು ರಿಕ್ಷಾ ಯೂನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಚಾರ್ಮಾಡಿ : ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ

Suddi Udaya

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

Suddi Udaya

ಧರ್ಮಸ್ಥಳ: ನೂತನವಾಗಿ ಪ್ರಾರಂಭಗೊಂಡ ಶ್ರೀ ಶಿವಶಕ್ತಿ ಅಯ್ಯಂಗಾರ್ ಬೇಕರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಭೇಟಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ  ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ

Suddi Udaya

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅನುಮತಿ ದೊರಕಿರುವ ಬಗ್ಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಿಂದ ಸ್ಪಷ್ಟೀಕರಣ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ತ್ರೋಬಾಲ್ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!