ಬೆಳ್ತಂಗಡಿ: ದುಬೈ ಮೂಲದ ಆಲ್ ಜಬೇರ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮೂಲದ ನಿವಾಸಿ ಅಲ್ಪೋನ್ಸ್ ಕರ್ಡೋಜ್ ರವರಿಂದ ಹಂತ ಹಂತವಾಗಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಘಟನೆ ಜು.31 ರಂದು ನಡೆದಿದೆ.
ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ಸಟೆನಿ ಅಲ್ಪೋನ್ಸ್ ಕರ್ಡೋಜ್ (64 ವರ್ಷ)ಎಂಬವರು ಈ ಹಿಂದೆ ವಿದೇಶದಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು, ಕಳೆದ 4.5 ವರ್ಷದಿಂದ ಊರಿನಲ್ಲಿಯೇ ಇದ್ದವರು ಫೇಸ್ಬುಕ್ ಜಾಲತಾಣದ ಲಿಂಕ್ ಮುಖಾಂತರ ದುಬೈ ಮೂಲದ ಆಲ್ ಜಬೇರ್ (al jaber) ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ಇರುವುದನ್ನು ಸತ್ಯ ಎಂದು ನಂಬಿ, ಲಿಂಕ್ ಮೂಲಕ ಅಪರಿಚಿತ ಕಂಪನಿಯ HRA ಅಧಿಕಾರಿ ಎಂದು ನಂಬಿಸಿ, ನಂತರ ಪಿರ್ಯಾದುದಾರರು ಆತನ ಮೊಬೈಲ್ ನಂಬ್ರ ಪಡೆದುಕೊಂಡು, ಆತನೊಂದಿಗೆ ವಾಟ್ಸಾಪ್ ಮೂಲಕ ಸಂವಹನ ಬೆಳೆಸಿದಾಗ ಪ್ರಾರಂಭಿಕ ಖರ್ಚು ಎಂದು ಅಲ್ಪೋನ್ಸ್ ಕರ್ಡೋಜ್ ನಂಬಿಸಿ ಅಲ್ಪೋನ್ಸ್ ಕರ್ಡೋಜ್ ರಿಂದ ಅಪರಿಚಿತನ ಬ್ಯಾಂಕ್ ಖಾತೆಗೆ ಜು. 24 ರಿಂದ ಜು.31 ರವರೆಗೆ ಹಂತ ಹಂತವಾಗಿ ರೂ. 2,72,621/- ಮೊತ್ತ ನಗದನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅಲ್ಪೋನ್ಸ್ ಕರ್ಡೋಜ್ ಮೋಸ ಹೋಗಿರುವ ಬಗ್ಗೆ ತಿಳಿದು, ನಂಬಿಸಿ ಮೋಸ ಮಾಡಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 77/2024 ಕಲಂ: 318(2), 318(4) ಭಾರತೀಯ ನ್ಯಾಯ ಸಂಹಿತೆ ಮತ್ತು 67(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.