31.1 C
ಪುತ್ತೂರು, ಬೆಳ್ತಂಗಡಿ
November 24, 2024
Uncategorized

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ: ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮುಖ್ಯಮಂತ್ರಿಗಳಿಗೆ ಮನವಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ ಸಂಭವಿಸಿದ್ದು ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಹಾಗೂ ಸಮರೋಪಾದಿಯಲ್ಲಿ ಕೈಗೊಳ್ಳುವುದರ ಜೊತೆಗೆ ಕೂಡಲೇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ ಸಂಭವಿಸಿದ್ದು ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಹಾಗೂ ಸಮರೋಪಾದಿಯಲ್ಲಿ ಕೈಗೊಳ್ಳುವುದರ ಜೊತೆಗೆ ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ, ಕಂದಾಯ ಸಚಿವರಾದ ಕೃಷ್ಣೇಬೈರೇಗೌಡ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇತಿಹಾಸ ಕಂಡರಿಯದ ದೊಡ್ಡ ಮಟ್ಟದ ಪ್ರವಾಹ ಉಂಟಾಗಿ, ಇಡೀ ಜಿಲ್ಲೆಯ ಜನಜೀವನವೇ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ.


ಜಿಲ್ಲೆಯಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ದೊಡ್ಡ ಪ್ರಮಾಣದ ಗುಡ್ಡ ಕುಸಿತ ಹಾಗೂ ಭೂಕುಸಿತ ಸಂಭವಿಸಿ, ಬಹುತೇಕ ಕಡೆ ರಸ್ತೆ ಸಂಪರ್ಕಗಳು ಸಂಪೂರ್ಣವಾಗಿ ಕಡಿತಗೊಂಡಿವೆ. ಜಿಲ್ಲೆಯಲ್ಲಿನ ಬಹುತೇಕ ಹೆದ್ದಾರಿಗಳು ನದಿಯಂತಾಗಿದ್ದು, ಇಡೀ ಜಿಲ್ಲೆಯಲ್ಲಿ ಭೂಮಾರ್ಗ ಸಂಚಾರವೇ ಅಪಾಯಕ್ಕೆ ಸಿಲುಕಿದೆ. ಹಲವಾರು ಮನೆಗಳು ಕುಸಿತದಿಂದ ಹಾನಿಗೊಂಡಿದ್ದು, ಸಾವಿರಾರು ಜನರು ನಿರ್ವಸಿತರಾಗಿದ್ದಾರೆ. ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದು ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಘಾಟಿ ಪರಿಸರದಲ್ಲಿ ಸಾಕಷ್ಟು ಅಪಾಯದ ಪರಿಸ್ಥಿತಿ ಇದ್ದು, ಘಾಟಿ ಪ್ರದೇಶದಲ್ಲಿ ಪ್ರಯಾಣಿಕರ ಪರದಾಟ ಹೇಳತೀರದು. ಜಿಲ್ಲೆಯಾದ್ಯಂತ ಹಲವಾರು ತೋಟಗಳು ಜಲಾವೃತಗೊಂಡಿದ್ದು ತೋಟಗಾರಿಕೆ ಹಾಗೂ ಇತರೇ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಇಡೀ ರೈತ ಸಮೂಹವೇ ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ.

ಜಿಲ್ಲೆಯಲ್ಲಿ ಇಂದೆಂದೂ ಸಂಭವಿಸಿದ ಮಟ್ಟದಲ್ಲಿ ತೀವು ತರದ ಹಾನಿಯಾಗಿದ್ದು, ತತಕ್ಷಣವೇ ಸಂಕಷ್ಟಕ್ಕೀಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರೋಪಾದಿಯಲ್ಲಿ ಕೈಗೊಳ್ಳುವುದರ ಜೊತೆಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕಾಗಿ ಅವರು ಮನವಿ ಮೂಲಕ ಒತ್ತಾಯಿಸಿದರು.

Related posts

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ

Suddi Udaya

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya

ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿಗೆ ಮ್ಯಾನೇಜ್ಮೆಂಟ್ ಪೇಸ್ಟ್ ನಲ್ಲಿ ಸಮಗ್ರ ಪ್ರಶಸ್ತಿ

Suddi Udaya

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತ್ತಷ್ಟು ವಿಘ್ನ : ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆ ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

Suddi Udaya

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೇಟಿ

Suddi Udaya
error: Content is protected !!