24.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ತೋಟತ್ತಾಡಿ ಪೆರ್ನಾಳೆ ಕೆರೆ ತುಂಬಿದ್ದು ಕೆರೆಯ ಗೇಟು ತೆರೆಯಲು ಆಗದೆ ತಂದೊಡ್ಡಿದೆ ಸಮಸ್ಯೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ಸ್ಥಳಕ್ಕೆ: ಗೇಟ್ ತೆರೆಯಲು ಯಶಸ್ವಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮಪಂಚಾಯತು ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪೆರ್ನಾಳೆ ಕೆರೆ ತುಂಬಿದ್ದು ಕೆರೆಯ ಗೇಟು ತೆರೆಯಲು ಸ್ಥಳೀಯರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು , ಮುಳುಗು ತಜ್ಞ ಈಶ್ವರ ಮಲ್ಪೆ ಅವರು ತಂಡ ಆಗಮಿಸಿ ಗೇಟ್ ತೆರೆಯಲು ಯಶಸ್ವಿಯಾಗಿದ್ದಾರೆ.

ಅರಣ್ಯ ಭಾಗದಲ್ಲಿ ಸುಮಾರು 27 ಎಕರೆ ಪ್ರದೇಶದಲ್ಲಿವ್ಯಾಪಿಸಿಕೊಂಡಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಿಗೆಯ ಕೃಷಿ ನೀರಿಗೆ ಆಧಾರವಾಗಿದೆ.

ಈ ಬಾರಿ ಮಳೆಗೆ ಕೆರೆಯು ಸಂಪೂರ್ಣ ತುಂಬಿದೆ. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು ಅದನ್ನು ತೆರೆಯಲು ಪಂಚಾಯಿತಿ ಮತ್ತು ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದ್ದು ಕೆರೆಯಲ್ಲಿ ಹೆಚ್ಚಿನ ನೀರು ತುಂಬಿರುವ ಕಾರಣ ಸಾಧ್ಯವಾಗಿಲ್ಲ. ಗೇಟು ತೆರೆದರೆ ಮಾತ್ರ ನೀರು ಸ್ಥಳೀಯ ತೋಡಿಗೆ ಹರಿದು ಕೆರೆಯಲ್ಲಿ ನೀರಿನ ಮಟ್ಟ ಹಾಗೂ ನೀರಿನ ಒತ್ತಡ ಕಡಿಮೆಯಾಗುತ್ತದೆ. ನೀರನ್ನು ಹೀಗೆ ಬಿಟ್ಟರೆ ಕೆರೆದಂಡೆ ಒಡೆಯುವ ಸಾಧ್ಯತೆಯಿದೆ. ಕೆರೆ ದಂಡೆ ಒಡೆದರೆ ಕರುನಾಳೆ ಪರಿಸರದ 30 ಕುಟುಂಬಗಳ ಸಮೇತ ನೆಲ್ಲಿಗುಡ್ಡೆ, ಕಂಚಾರಿ ಕಂಡ,ಬೇಂದ್ರಾಳ ಮೊದಲಾದ ಪ್ರದೇಶಗಳ ಜನರಿಗೆ ತೀವ್ರ ಸಮಸ್ಯೆ ಹಾಗೂಅಪಾಯವು ಉಂಟಾಗುವ ಸಾಧ್ಯತೆ ಇತ್ತು.ಇದೀಗ ಗೇಟ್‌ ತೆಗೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು ಪ್ರಯತ್ನ ನಡೆಸಿದ್ದರೆ.

ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದು ಮುಳುಗು ತಜ್ಞರಿಂದ ಮಾತ್ರ ಗೇಟ್‌ ತೆಗೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಖ್ಯಾತ ಮುಳುಗು ತಜ್ಞ ಈಶ್ವ‌ರ್ ಮಲ್ಪೆ ಅವರ ತಂಡ ಸ್ಥಳಕ್ಕೆ ಆಗಮಿಸಿ ಗೇಟ್ ತೆರವು ಗೊಳಿಸಿದ್ದಾರೆ. ಕೆ.ಪಿ.ಸಿ.ಸಿ ಸದಸ್ಯ ರಕ್ಷಿತ್ ಶಿವರಾಂ ಗ್ರಾಮ ಚಾಯತಿನ ಅಧ್ಯಕ್ಷ ಶಾರದಾ ಮತ್ತು ಪಿಡಿಒ ಪುರುಷೋತ್ತಮ್ಸದಸ್ಯರು,ಅಧಿಕಾರಿಗಳು, ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.

Related posts

ಮದ್ದಡ್ಕ ಪರಿಸರದಲ್ಲಿ ಕಾಮಗಾರಿಯಲ್ಲಿ ನಿರ್ಮಿಸಿದ ಚರಂಡಿಯ ಒಳಗೆ ಕಿಡಿಗೇಡಿಗಳಿಂದ ತ್ಯಾಜ್ಯ ಕಸ ಎಸೆತ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನಿಂದ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನ

Suddi Udaya

ರಾಜ್ಯದ “ಅನ್ನಭಾಗ್ಯ ಯೋಜನೆ” ಯ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದಿಲ್ಲ: ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ರವರ ಪ್ರಶ್ನೆಗೆ ಸಚಿವರ ಉತ್ತರ

Suddi Udaya

Suddi Udaya
error: Content is protected !!