ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಒಕ್ಕೂಟದ ಅಧ್ಯಕ್ಷ ಆರ್ ಜೆ ಶೈಲೇಶ್ ರವರು ಮಾತನಾಡಿ ಆಟಿ ತಿಂಗಳ ಮಹತ್ವದ ಬಗ್ಗೆ ಹಾಗೂ ಮೊಟ್ಟ ಮೊದಲು ದೇಶವಿದೇಶಗಳಲ್ಲಿ ತುಳು ಅಕಾಡೆಮಿಗೆ ಚಾಲನೆಯನ್ನು ನೀಡಿದ ಡಿ ವೀರೇಂದ್ರ ಹೆಗ್ಗಡೆಯವರನ್ನು ಸ್ಮರಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.
ಮಕ್ಕಳು ತುಳು ಗಾದೆ ಪಾದ್ದಾನ, ಹಳೆ ವಸ್ತುಗಳು ,ನೃತ್ಯ , ಆಟಿ ತಿಂಗಳ ಉಪಾಹಾರ ಇತ್ಯಾದಿಗಳ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರೂಪಣೆಯನ್ನು ರಕ್ಷಣ್ ಶೆಟ್ಟಿ, ಸ್ವಾಗತವನ್ನು ಸಿಂಚನ, ಧನ್ಯವಾದಗಳು ಕುಮಾರಿ ನಿಧಿ ನೆರವೇರಿಸಿಕೊಟ್ಟರು. ಶಿಕ್ಷಕ ವೃಂದದವರು ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.