April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಂಯುಕ್ತ ಜಮಾಅತ್ ಖಾಝಿ ಸ್ವೀಕಾರ ವಿಚಾರ- ಬೆಳ್ತಂಗಡಿ ಸಮುದಾಯ ಮುಖಂಡರಿಂದ ಸಮಾಲೋಚನಾ ಸಭೆ: ಕಾಜೂರು‌ ತಂಙಳ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವಂತೆ ಆಗ್ರಹ

ಬೆಳ್ತಂಗಡಿ; ಖಾಝಿ ಕೂರತ್‌ ತಂಙಳ್ ಅಕಾಲಿಕ ನಿಧನದಿಂದ ತೆರವಾಗಿರುವ ಖಾಝಿ ಸ್ಥಾನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಖಮರುಲ್ ಉಲಮಾ ಕಾಂತಪುರಂ ಶೈಖ್ ಅಬೂಬಕ್ಕರ್ ಅಹಮದ್ (ಎ.ಪಿ ಉಸ್ತಾದ್) ಅವರನ್ನು ಖಾಝಿಯಾಗಿ ಸ್ವೀಕರಿಸುವ ಐತಿಹಾಸಿಕ ಸಮಾರಂಭದ ಬಗ್ಗೆ ಆ.2 ರಂದು ಬೆಳ್ತಂಗಡಿಯಲ್ಲಿ ಸಮುದಾಯ ಮುಖಂಡರ ಸಮಾಲೋಚನಾ ಸಭೆ ನಡೆಯಿತು.

ಖಾಝಿ ಬೈಅತ್ ಬಳಿಕ ಅವರ ಪರಮಾಧಿಕಾರದಂತೆ ಅವರಿಗೆ ಸಹಾಯಕರಾಗಿ ನೇಮಿಸುವ ವೇಳೆ ಸಯ್ಯಿದ್ ಕಾಜೂರು ತಂಙಳ್ ಅವರನ್ನು ಪರಿಗಣಿಸುವಂತೆ ಸೇರಿದ್ದ ಮುಖಂಡರು ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದರು. ಈ ಬಗ್ಗೆ ಸಂಯುಕ್ತ ಜಮಾಅತ್ ಅಧ್ಯಕ್ಷರನ್ನು ಭೇಟಿ ಮಾಡುವುದು ಹಾಗೂ ಎ.ಪಿ ಉಸ್ತಾದ್ ಅವರನ್ನು ಭೇಟಿ ಮಾಡಲು ನಿಯೋಗ ರಚಿಸಲಾಯಿತು.
ಕಳೆದ ಇಷ್ಟೂ ವರ್ಷಗಳಲ್ಲಿ ಬೆಳ್ತಂಗಡಿ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿಯಾಗಿ ಸೇವೆ ಸಲ್ಲಿಸಿದ ಸಾದಾತ್ ತಂಙಳ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಸಭೆಯ ನಿರ್ಣಯದಂತೆ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅವರನ್ನು ನಿಯೋಗ ಭೇಟಿ ಮಾಡಿ ಸಭೆಯ ಇಂಗಿತವನ್ನು ಹಾಗೂ ಬೇಡಿಕೆಗಳನ್ನು ಮುಂದಿಡಲಾಯಿತು.


ಸಭೆಯಲ್ಲಿ ಹಲವು ಮೊಹಲ್ಲಾಗಳ ಪ್ರಮುಖರು, ಸಂಯುಕ್ತ ಜಮಾಅತ್ ಪ್ರಮುಖರು ಹಾಗೂ ಸಮುದಾಯ ನಾಯಕರುಗಳು ಭಾಗವಹಿಸಿದ್ದರು.

Related posts

ಪ್ರದೀಪ್ ಮರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Suddi Udaya

ಬೆಳ್ತಂಗಡಿ ಕ್ಯಾಂಪ್ಕೋ ದಿಂದ ಸಹಾಯಧನ ಹಸ್ತಾಂತರ

Suddi Udaya

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

Suddi Udaya

ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

Suddi Udaya

ಮಂಗಳೂರು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆಯ ಉದ್ಘಾಟನೆ

Suddi Udaya
error: Content is protected !!