23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಸ್ಮಾನ್ ಗರ್ಡಾಡಿರವರು ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿಗೊಂಡು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿ

ಬೆಳ್ತಂಗಡಿ: ಉಸ್ಮಾನ್ ಗರ್ಡಾಡಿಯವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಪ್ರಮುಖ ಅಗ್ನಿಶಾಮಕ (ಲೀಡಿಂಗ್ ಫೈರ್‌ಮ್ಯಾನ್) ಹುದ್ದೆಗೆ ಪದೋನ್ನತಿಗೊಂಡು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿಗೊಂಡಿರುತ್ತಾರೆ.


ಇವರು 2005 ರಲ್ಲಿ ನೇರ ನೇಮಕಾತಿ ಮೂಲಕ ಇಲಾಖೆಗೆ ಸೇರ್ಪಡೆಗೊಂಡಿದ್ದು, ಶಿವಮೊಗ್ಗದಲ್ಲಿ ಇಲಾಖಾ ತರಬೇತಿ ಪಡೆದ ಬಳಿಕ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ವರ್ಗಾವಣೆಗೊಂಡಿದ್ದು, ಇದೀಗ ಪದೋನ್ನತಿ ಹೊಂದಿ ಮತ್ತೆ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಆಗಮಿಸಿರುತ್ತಾರೆ.

ಇವರು ಇಲಾಖೆಯಲ್ಲಿ ಸಲ್ಲಿಸಿದ ಸೇವೆಗಾಗಿ 2021ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾಗಿದ್ದು, ಅಗ್ನಿಶಮನ ಹಾಗೂ ರಕ್ಷಣಾ ಕಾರ್ಯದಲ್ಲಿ ಸಹಕರಿಸುವುದರೊಂದಿಗೆ ಜನರಲ್ಲಿ ಅಗ್ನಿ ಅನಾಹುತಗಳ ಹಾಗೂ ಇತರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರೊಡನೆ ಉತ್ತಮ ಸಂಪರ್ಕ ಸಂವಹನ ಹೊಂದಿರುವ ಇವರು ತಾಲೂಕಿನ ಗರ್ಡಾಡಿ ಗ್ರಾಮದ ನಿವಾಸಿಯಾಗಿರುತ್ತಾರೆ.

Related posts

ಅಂಡಿಂಜೆ: ಕಾರು ಡಿಕ್ಕಿ ಹೊಡೆದು 5 ವರ್ಷದ ಬಾಲಕ ಸಾವು

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಇಲಂತಿಲ: ಮರದಿಂದ ಬಿದ್ದಿದ್ದ ನಾರಾಯಣ ಪೂಜಾರಿರವರು ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರಿಂದ ಮತದಾನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಕವಿ ಮಾಸ್ತಿ ಸಂಸ್ಮರಣೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪ್ರತ್ಯೇಕ ಎರಡು ಅಪಘಾತ: ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!