25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳೆಂಜ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

ಕಳೆಂಜ : ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳೆಂಜ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಸಂತ ಸೆಬಾಸ್ಟಿಯನ್ ದೇವಾಲಯ ಕಳೆಂಜದಲ್ಲಿ ಆ. 4ರಂದು ಪ್ರಾರಂಭಗೊಂಡಿತು.


ಉದ್ಘಾಟನೆಯನ್ನು ನೆರವೇರಿಸಿದ ಕಳೆಂಜ ಸಂತ ಸೆಬಾಸ್ಟಿಯಾನ್ ರವರ ದೇವಾಲಯದ ಧರ್ಮಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಮಾತನಾಡಿ ಈ ಶಿಬಿರದ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದರು. ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ನ ಮಾಲಕರಾದ ಕೆ. ಪ್ರಭಾಕರ್ ಸಾಲಿಯನ್ ಮಾಹಿತಿ ನೀಡಿದರು.


ಮುಖ್ಯ ಅತಿಥಿಗಳಾಗಿ ಕಳೆಂಜ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಅಧ್ಯಕ್ಷ ಥೋಮಸ್ ಪನ ಚಿಕ್ಕಲ್ , ಕಳೆಂಜ ಸಂತ ಸೆಬಾಸ್ಟಿಯಾನ್ ದೇವಾಲಯದ ಟ್ರಸ್ಟಿ ಜೋಳಿ ತಟ್ಟಾಂ ಪರಂಬಿಲ್ ಆಗಮಿಸಿದ್ದರು.


ಶಿಬಿರವು ಆ. 4ರಿಂದ ಆ. 18ರವರೆಗೆ ಪೂರ್ವಾಹ್ನ 9.30ರಿಂದ ಅಪರಾಹ್ನ 4:30 ವರೆಗೆ ಜರುಗಲಿದೆ.

Related posts

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದಿಂದ “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಬಂದೂಕು ಪ್ರಕರಣ ಮಧ್ಯಂತರ ತಡೆ ಮುಂದೂಡಿದ ಹೈಕೋರ್ಟ್

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಶಿರ್ಲಾಲು ಶ್ರಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ

Suddi Udaya

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಎ ಸಿ ಎಫ್ ಭೇಟಿ

Suddi Udaya
error: Content is protected !!