September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದಿಂದ “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

ಉಜಿರೆ: ಜೀವನ ಕೌಶಲ್ಯಗಳ ನಿರಂತರ ಕಲಿಕೆ ಮತ್ತು ಮಾನಸಿಕ ಆರೋಗ್ಯದ ಸುಸ್ಥಿರ ನಿರ್ವಹಣೆ ಮಾತ್ರವೇ ದೀರ್ಘಕಾಲದ ವೃತ್ತಿಪರತೆಯಲ್ಲಿ ನೆರವಾಗಬಲ್ಲವು ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗಡೆ ಅಭಿಪ್ರಾಯಪಟ್ಟರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗವು “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕುರಿತು ಆಯೋಜಿಸಿದ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜೀವನ ಕೌಶಲ್ಯಗಳು ಮತ್ತು ಮಾನಸಿಕ ಆರೋಗ್ಯವೆಂಬ ಎರಡು ಕಣ್ಣುಗಳು ವಿದ್ಯಾರ್ಥಿಯೋರ್ವನಿಗೆ ತುಂಬಾ ಮುಖ್ಯ. ಜನರೊಡನೆ ಬೆರೆತು ಕೆಲಸ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತ ಸಂದರ್ಭಗಳನ್ನು ಎದುರುಗೊಳ್ಳುವ ಸಾಧ್ಯತೆಯಿರುತ್ತದೆ. ಇಷ್ಟಪಟ್ಟ ಕೆಲಸವೇ ಸಿಗುವುದೆಂಬ ಭರವಸೆಯೂ ಇಲ್ಲ. ಬದುಕು ತೋರಿದ ದಾರಿಯಲ್ಲಿ ನಿಷ್ಠೆಯಿಂದ ನಡೆಯಬೇಕಾಗುತ್ತದೆ ಎಂದರು.


ಯಾವುದೇ ವೃತ್ತಿಯಿರಲಿ, ಅದರಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದಿ ಯಶಸ್ವಿಯಾಗಬೇಕಾದರೆ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಸ್ಥಿರತೆ ಬೇಕಾಗುತ್ತದೆ. ಫಿಟ್ನೆಸ್ ಕಾಪಾಡಿಕೊಳ್ಳುವುದರ ಜೊತೆಗೆ ಸಮಯ ನಿರ್ವಹಣೆಯ ಕೌಶಲ್ಯವೂ ಇರಬೇಕು. ಒಬ್ಬ ಯಶಸ್ವಿ ಸಾಮಾಜಿಕ ಕಾರ್ಯಕರ್ತ ಭಿನ್ನ ಭಿನ್ನ ಜನರೊಡನೆ ಸಂವಹನ ಮಾಡಬೇಕಾದ ಸಂದರ್ಭ ಒದಗಿಬರಬಹುದು. ಆಗ ಸಂವಹನ ಕೌಶಲ್ಯ, ತಾಳ್ಮೆ, ನಮ್ರತೆಯಂತಹ ಗುಣಗಳು ನೆರವಾಗಬಲ್ಲವು ಎಂದು ಸಲಹೆ ನೀಡಿದರು.


ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಲ್ಕತ್ತೆಯ ಮನಃಶಾಸ್ತ್ರಜ್ಞ ಸುಮಿತ್ ದತ್ತ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಡಾ.ರವಿಶಂಕರ್ ಕೆ ಆರ್ , ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸುವೀರ್ ಜೈನ್ ಹಾಗೂ ಡಾ.ಅತುಲ್ ಎಸ್. ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಕ್ಷತಾ ಕಾರಂತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು. ಶಾಹಿದ್ ಅಫ್ರಿದಿ ಕಾರ್ಯಕ್ರಮ ನಿರೂಪಿಸಿದರು.

Related posts

ಗುರುವಾಯನಕೆರೆ :ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಓರಿಯೆಂಟೇಶನ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗಪೂಜೆ ಹಾಗೂ ಉತ್ಸವಾದಿಗಳು

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರಿಂದ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ಕಾಲಾವಧಿ ನೇಮೋತ್ಸವದ ಸಮಾಲೋಚನಾ ಸಭೆ

Suddi Udaya

ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಭೇಟಿ

Suddi Udaya
error: Content is protected !!