24.4 C
ಪುತ್ತೂರು, ಬೆಳ್ತಂಗಡಿ
April 4, 2025
ಸಂಘ-ಸಂಸ್ಥೆಗಳು

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ಮಹಿಳಾ ವೇದಿಕೆಯಿಂದ ಆಟಿಕೂಟ ಆಚರಣೆ

ಬೆಳ್ತಂಗಡಿ:ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯ ವತಿಯಿಂದ ಆ.4 ರಂದು ಉಜಿರೆಯ ಅರಿಪಾಡಿ ಮಠದ ಕಲಾವೇದಿಕೆಯಲ್ಲಿ ಆಟಿಕೂಟವನ್ನು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿ ಕೂಟ ಮಹಾ ಜಗತ್ತಿನ ಅಧ್ಯಕ್ಷ ವಿಶ್ವನಾಥ ಹೊಳ್ಳರವರು ದೀಪ ಬೆಳಗಿಸಿ ಆಟಿಕೂಟಕ್ಕೆ ಚಾಲನೆ ನೀಡಿದರು.

ನಂತರ ಆಟಿಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಹಿಳಾ ವೇದಿಕೆಯ ಸದಸ್ಯರಾದಂತಹ ವಿದ್ಯಾಶ್ರೀ ಅಡೂರ್ ಅವರು ಸ್ಪರ್ಧೆಗಳನ್ನು ನಿರ್ವಹಿಸಿದರು. ಮಹಿಳಾ ವೇದಿಕೆಯ ಅನೇಕ ಸದಸ್ಯರು ತುಳುನಾಡಿನ ಖಾದ್ಯಗಳನ್ನು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಕಾರ್ಯಕ್ರಮದಲ್ಲಿ ಹಂಚಿಕೊಂಡು ತಿಂದು,ತಿನಿಸಿ ಸಂಭ್ರಮ ಪಟ್ಟರು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವನಾಥ ಹೊಳ್ಳ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಜಯಂತಿ ಪುರಂದರ್,ಕೇಂದ್ರ ಖಜಾಂಜಿ ವಾಸುದೇವ ಸೋಮಯಾಜಿ,ಮಹಿಳಾ ವೇದಿಕೆಯ ಅಧ್ಯಕ್ಷೆ ನಳಿನಿ ಹೊಳ್ಳ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಇಂದಿರಾ ಹೊಳ್ಳ ಪ್ರಾರ್ಥನೆ ಹಾಡಿದರು.ಸುಜಾತ ರಾವ್ ಸ್ವಾಗತಿಸಿದರು,ಮಹಿಳಾ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಅಡೂರ್ ನಿರೂಪಿಸಿದರು.ಗೀತಾ ವಿ ಸೋಮಯಾಜಿ ಆಟಿಯ ಮಹತ್ವವನ್ನ ವಿವರಿಸಿದರು.ಅಖಿಲ ಪ್ರಕಾಶ್ ನಾರಾಯಣ್ ಖಾದ್ಯಗಳನ್ನು ತಯಾರಿಸಿ ತಂದವರ ಪಟ್ಟಿಯನ್ನು ಓದಿ,ಆಶಾ ಅಡೂರ್ ವಂದಿಸಿದರು

ಹೆಚ್ಚಿನ ಸಂಖ್ಯೆಯಲ್ಲಿ ಕೂಟ ಮಹಾಜಗತ್ತಿನ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿದ್ದ ಸರಕಾರದ ಸುತ್ತೋಲೆಗೆ ಹೈಕೋರ್ಟ್ ತಡೆಯಾಜ್ಞೆ

Suddi Udaya

ಉಜಿರೆ ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya
error: Content is protected !!