ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

ಕೊಕ್ಕಡ : ಕೊಕ್ಕಡ ಅಮೃತ ಗ್ರಾಮ ಪಂಚಾಯತ್, ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಆ.5ರಂದು ಕೊಕ್ಕಡ ಅಂಬೇಡ್ಕರ್ ಸಭಾಭವನ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ನೆರವೇರಿಸಿದರು.

ಪುತ್ತೂರು ನೆಮ್ಮದಿ ವೆಲ್‌ನೆಸ್ ಸೆಂಟರ್ ಮ್ಹಾಲಕ ಕೆ. ಪ್ರಭಾಕರ ಸಾಲ್ಯಾನ್ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಬೇಬಿ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕೊಕ್ಕಡ ಪಂ. ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಸಮಾಜ ಸೇವಕ ಬಾಲಕೃಷ್ಣ ನೈಮಿಷ ಸೌತಡ್ಕ, ಕೊಕ್ಕಡ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪುಡ್ಕೆತ್ತೂರು, ಶ್ರೀಮತಿ ವಸಂತಿ ಶಬರಾಡಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪವಿತ್ರಾಗುರುಪ್ರಸಾದ್, ಸದಸ್ಯ ಪುರುಷೋತ್ತಮ್ ಉಪಸ್ಥಿತರಿದ್ದರು.

ಶಿಬಿರವು ಆ.5 ರಿಂದ ಆ.19ರವರೆಗೆ ಪೂರ್ವಾಹ್ನ 9-30 ರಿಂದ ಅಪರಾಹ್ನ 4-30 ರವರೆಗೆ ನಡೆಯಲಿದೆ.

Related posts

ಡಾ.ಮೋಹನ್ ಆಳ್ವ ರವರಿಗೆ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಅಭಿನಂದನೆ

Suddi Udaya

ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಶಿಬಾಜೆಯ ವಿರಾಜ್ ಜೆ ಪೂಜಾರಿ

Suddi Udaya

ಪುಂಜಾಲಕಟ್ಟೆ: ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

Suddi Udaya

ನಿಡ್ಲೆ: ಮುಳಂಪಾಯ ಲಕ್ಷ್ಮಿ ದೇವಧರ್ ನಿಧನ

Suddi Udaya

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

Suddi Udaya
error: Content is protected !!