ಬೆಳ್ತಂಗಡಿ: ನಿರಂತರತೆಯನ್ನು ಹೊಂದಿ ಮುನ್ನಡೆಯುವುದೇ ವಿಜ್ಞಾನ, ತಂತ್ರಜ್ಞಾನದ ಧ್ಯೇಯವಾಗಿದೆ ಎಂದು ಪುತ್ತೂರು ಫಿಲೋಮಿನಾ ಕಾಲೇಜಿನ ಡೀನ್ ಗೋವಿಂದ ಪ್ರಕಾಶ್ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ನ ಐಟಿ ಕ್ಲಬ್ ಆಶ್ರಯದಲ್ಲಿ ಜರುಗಿದ ಕ್ವಾಟ್ರಿಕ್ಸ್-2k24 ಐಟಿ ಫೆಸ್ಟ್ ನ್ನು ಉದ್ಘಾಟಿಸಿ ಮಾತನಾಡುತ್ತಾ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಬದಲಾವಣೆಗೆ ಸರಿಯಾಗಿ ಬದಲಾವಣೆ ಹೊಂದದಿದ್ದರೆ ಹಿಂದೆ ಉಳಿಯುವ ಸಾಧ್ಯತೆ ಇದೆ. ಆಧುನಿಕ ಕಾಲದಲ್ಲಿ ಹೆಚ್ಚಿನ ಎಲ್ಲಾ ಅಧ್ಯಯನಗಳು, ಕೆಲಸ ಕಾರ್ಯಗಳು ಕಂಪ್ಯೂಟರನ್ನು ಅವಲಂಬಿಸಿರುವುದರಿಂದ ಎಲ್ಲರೂ ಕಂಪ್ಯೂಟರ್ ಜ್ಞಾನವನ್ನು ಪಡೆಯುವ ಅಗತ್ಯವಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ
ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್, ಐಟಿ ಕ್ಲಬ್ ನ ಅಧ್ಯಕ್ಷ ಪವನ್ ರಾಜ್ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸುಧೀರ್ ಕೆಎನ್ ಸ್ವಾಗತಿಸಿದರು. ಉಪನ್ಯಾಸಕಿ ಕಾಮಾಕ್ಷಿ ಧನ್ಯವಾದವಿತ್ತರು. ಕುಮಾರಿ ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.