33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಪ ನಿರೀಕ್ಷಕರಾಗಿ ಭಡ್ತಿಗೊಂಡ ದೇವಪ್ಪ ಎಂ ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಸಹಾಯಕ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ಎಂ. ಉಪ ನಿರೀಕ್ಷಕರಾಗಿ (ಎಸ್.ಐ) ಭಡ್ತಿಗೊಂಡು ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದರು.

ಇವರು ಕಳೆದ 31 ವರ್ಷಗಳಿಂದ ಮಂಗಳೂರು ಪಾಂಡೇಶ್ವರ, ಉಪ್ಪಿನಂಗಡಿ, ಮೂಡಬಿದ್ರೆ, ಪುಂಜಾಲಕಟ್ಟೆ, ಬಂಟ್ವಾಳ ಗ್ರಾಮಾಂತರ, ವೇಣೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ ವೃತ್ತ ನಿರೀಕ್ಷರ ಕಚೇರಿಯಲ್ಲಿ 3 ವರ್ಷ, ಬಳಿಕ ನಾಲ್ಕುವರೆ ವರ್ಷಗಳಿಂದ ಬೆಳ್ತಂಗಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.

ಮೂಲತಃ ಬೆಳಾಲಿನ ಇವರು ಪ್ರಸ್ತುತ ಧರ್ಮಸ್ಥಳ ಕನ್ಯಾಡಿಯಲ್ಲಿ ಕುಟುಂಬ ಸಹಿತ ವಾಸ್ತವ್ಯ ಇದ್ದಾರೆ.

Related posts

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya

ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯಲ್ಲಿ ಭಜನಾ ಪರಿಷತ್ತು ಕಾರ್ಯದರ್ಶಿಯಿಂದ ಅಹವಾಲು ಸ್ವೀಕಾರ

Suddi Udaya

ಇಂದಬೆಟ್ಟು: ಬೆಳ್ಳೂರು ಬೈಲಿನ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಜಿಲ್ಲಾ ಮಟ್ಟದ ಭಾವೈಕ್ಯತೆ ಮಕ್ಕಳ ಮೇಳ: ಕುಂಭಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಉಜಿರೆ: ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

Suddi Udaya
error: Content is protected !!