22.9 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ವಾಣಿ ಕಾಲೇಜಿನಲ್ಲಿ ಕ್ವಾಟ್ರಿಕ್ಸ್-2k24 ಐಟಿ ಫೆಸ್ಟ್

ಬೆಳ್ತಂಗಡಿ: ನಿರಂತರತೆಯನ್ನು ಹೊಂದಿ ಮುನ್ನಡೆಯುವುದೇ ವಿಜ್ಞಾನ, ತಂತ್ರಜ್ಞಾನದ ಧ್ಯೇಯವಾಗಿದೆ ಎಂದು ಪುತ್ತೂರು ಫಿಲೋಮಿನಾ ಕಾಲೇಜಿನ ಡೀನ್ ಗೋವಿಂದ ಪ್ರಕಾಶ್ ಹೇಳಿದರು.

ಅವರು ವಾಣಿ ಪದವಿಪೂರ್ವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ನ ಐಟಿ ಕ್ಲಬ್ ಆಶ್ರಯದಲ್ಲಿ ಜರುಗಿದ ಕ್ವಾಟ್ರಿಕ್ಸ್-2k24‌ ಐಟಿ ಫೆಸ್ಟ್ ನ್ನು ಉದ್ಘಾಟಿಸಿ ಮಾತನಾಡುತ್ತಾ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಬದಲಾವಣೆಗೆ ಸರಿಯಾಗಿ ಬದಲಾವಣೆ ಹೊಂದದಿದ್ದರೆ ಹಿಂದೆ ಉಳಿಯುವ ಸಾಧ್ಯತೆ ಇದೆ. ಆಧುನಿಕ ಕಾಲದಲ್ಲಿ ಹೆಚ್ಚಿನ ಎಲ್ಲಾ ಅಧ್ಯಯನಗಳು, ಕೆಲಸ ಕಾರ್ಯಗಳು ಕಂಪ್ಯೂಟರನ್ನು ಅವಲಂಬಿಸಿರುವುದರಿಂದ ಎಲ್ಲರೂ ಕಂಪ್ಯೂಟರ್ ಜ್ಞಾನವನ್ನು ಪಡೆಯುವ ಅಗತ್ಯವಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ

ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್, ಐಟಿ ಕ್ಲಬ್ ನ ಅಧ್ಯಕ್ಷ ಪವನ್ ರಾಜ್ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸುಧೀರ್ ಕೆಎನ್ ಸ್ವಾಗತಿಸಿದರು. ಉಪನ್ಯಾಸಕಿ ಕಾಮಾಕ್ಷಿ ಧನ್ಯವಾದವಿತ್ತರು. ಕುಮಾರಿ ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related posts

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಬೆಂಕಿ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಪಟ್ರಮೆ: ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪಗೌಡ) ನಿಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಸ್ವಾಗತ ದಿನಾಚರಣೆ ವಿದ್ಯಾರ್ಥಿ ಸಂಘ ಹಾಗೂ ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಕಾರ್ಯಕ್ರಮದಡಿ ನಿರ್ಮಾಣಗೊಳ್ಳಲಿರುವ ವಸತಿ ಶಾಲೆಯ ಆವರಣ: ಶಾಸಕ ಹರೀಶ್ ಪೂಂಜರಿಂದ ಸ್ಥಳ ಪರಿಶೀಲನೆ

Suddi Udaya
error: Content is protected !!