ಬೆಳ್ತಂಗಡಿ: ಪುಂಜಾಲಕಟ್ಟೆ – ಉಲ೯ ರಸ್ತೆ ಗಂಪದಡ್ಡ ಪ್ರದೇಶದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಿದ್ದು
ಶೀಘ್ರ ದುರಸ್ತಿ ಮಾಡುವಂತೆ ಆಗ್ರಹಿಸಿ “ಕನ್ನಡಸೇನೆ-ಕರ್ನಾಟಕ” ಬೆಳ್ತಂಗಡಿ ತಾಲೂಕು ಸಮಿತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ ನಿರೀಕ್ಷಣ ಮಂದಿರದಲ್ಲಿ ಸಹಾಯಕ ಆಯುಕ್ತರು ಪುತ್ತೂರು ಇವರನ್ನು “ಕನ್ನಡಸೇನೆ-ಕರ್ನಾಟಕ” ತಾಲೂಕು ಅಧ್ಯಕ್ಷರಾದ ಗುರುಪ್ರಸಾದ್ ಮಾಲಾಡಿ ಮತ್ತು ಕನ್ನಡ ಸೇನೆಯ ಮುಖಂಡರು ಭೇಟಿಯಾಗಿ ಸಾರ್ವಜನಿಕ ಅಹವಾಲು ಸಲ್ಲಿಸಿದರು. ಮುಖಂಡರಾದ ಇಸ್ಮಾಯಿಲ್, ಬೇಬಿ, ಕೃಷ್ಣ ಮಾಲಾಡಿ, ಅಡ್ರಿನ್, ಅಶ್ರಫ್, ಜಯರಾಮ ಮಡಂತ್ಯಾರು ಉಪಸ್ಥಿತರಿದ್ದರು.
ಪುಂಜಾಲಕಟ್ಟೆ-ಉಲ೯ ರಸ್ತೆ ಡಾಮರೀಕರಣಗೊಂಡು ಕೆಲವು ವರ್ಷವಾಗಿದ್ದು, ವಿಪರೀತವಾಗಿ ಡಾಮರೀಕರಣ ಎದ್ದು ಹೋಗಿದ್ದು, ಮಲೀನ ನೀರು ರಸ್ತೆಯಲ್ಲಿ ನಿಂತು ಡೆಂಗ್ಯೂ ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗಿದ್ದು, ಶಾಲಾ ವಾಹನ, ಆಟೋ ಚಾಲಕರು ಶಾಲಾ ಮಕ್ಕಳನ್ನು ಶಾಲೆಗೆ ತಲುಪಿಸುವಾಗ, ಕೃಷಿಕರು ಮಾರುಕಟ್ಟೆಗೆ ತಮ್ಮ ಫಲವಸ್ತುಗಳನ್ನು ಕೊಂಡೊಯ್ಯುವ ಸಂದರ್ಭ ಗಂಪದಡ್ಡ ಪ್ರದೇಶದಲ್ಲಿ ರಸ್ತೆ ಕುಸಿಯುವ ಭೀತಿಯಿದ್ದು, ಅಪಾಯದ ಮುನ್ಸೂಚನೆಗೆ ಕಾರಣವಾದುದಲ್ಲದೆ, ಊರ ಪ್ರದೇಶದ ಮುಂದುವರಿದ ರಸ್ತೆಯಲ್ಲಿ ಮಾರ್ಗ ಅಗೆದು ಜಲ್ಲಿ ಅಳವಡಿಸಿ, ರಸ್ತೆ ಡಾಮರೀಕರಣವಾಗದೆ ಜಲ್ಲಿಗಳು ಎದ್ದು ಬರುತ್ತಿದ್ದು, ರಸ್ತೆ ಹಿಂದಿಗಿಂತಲೂ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟದ ಸ್ಥಿತಿಯಲ್ಲಿರುವುದರಿಂದ ಇಲಾಖೆ ಸೂಕ್ತ ಕ್ರಮ ಶೀಘ್ರ ನಡೆಸಬೇಕಿದೆ.
ಇದೇ ರೀತಿ ವಿಪರೀತ ಮಳೆಯ ಸಂದರ್ಭದಲ್ಲಿ ಮಾಲಾಡಿ ಮಡಂತ್ಯಾರು ವ್ಯಾಪ್ತಿಯ ರಸ್ತೆ ವ್ಯವಸ್ಥೆ ಬಗ್ಗೆ ಕನ್ನಡಸೇನೆ ಅವಲೋಕನ ನಡೆಸಿ, ಪುರಿಯ ಅಂಗನವಾಡಿ ಶಾಲೆ ಎದುರಿನ ಮೋರಿ ಬ್ಲಾಕ್ ಆಗಿ ಮಲೀನ ನೀರು ನಿಂತು, ಮುಂದುವರಿದು ಕುರಿಯೋಡಿ ರಸ್ತೆ ರಿಪೇರಿ ಬಗ್ಗೆ, ಮಾಲಾಡಿ ಕಜೆ ಕಾಲನಿ ರಸ್ತೆ, ಕುಕ್ಕಳ ಬಸವಗುಡಿಯಲ್ಲಿ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದೆ 5 ಸೆಂಟ್ಸ್ ಕಾಲನಿಯಲ್ಲಿ ಡೆಂಗ್ಯೂ ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗಿದ್ದು, ಸ್ಥಳೀಯ ಆಡಳಿತಕ್ಕೆ ಶೀಘ್ರ ವ್ಯವಸ್ಥೆಗೆ ಮನವಿ ಸಲ್ಲಿಸಲಾಯಿತು.