23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬದನಾಜೆ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳಾಲು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಬೆಳ್ತಂಗಡಿ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ (ರಿ )ಬೆಳ್ತಂಗಡಿ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಬದನಾಜೆ ಹೈಸ್ಕೂಲ್ ಇದರ ಸಹಯೋಗದೊಂದಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತ್ತು.


ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಬಾಬು ನಾಯ್ಕ್, ಉಮ್ಮರಬ್ಬ ಮತ್ತು ಶಾಲಾ ಮುಖ್ಯ ಶಿಕ್ಷಕರಾದ ಜಮುನಾ ಕೆ ಸ್ ಒಕ್ಕೂಟದ ಮತ್ತು ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಯವರಾದ ದೇವಿಪ್ರಸಾದ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆಯ ಶಿಬಿರಧಿಕಾರಿಯವರಾದ ದೇವಿ ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು, ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದು ತಮ್ಮ ಜೀವನವನ್ನು ಹಾನಿಗೊಳಪಡಿಸುತ್ತಿದ್ದು, ವಿನಾಶದ ಅಂಚಿಗೆ ದಾಪುಗಾಲನ್ನು ಇಡುತ್ತಿದ್ದಾರೆ ಕುಡಿತ ಧೂಮಪಾನ ಮಾದಕ ದ್ರವ್ಯ ವ್ಯಸನ ಮುಕ್ತರಾಗುವಂತೆ ಕರೆ ನೀಡುವುದರೊಂದಿಗೆ ಕೆಲವು ದೃಷ್ಟಾಂತಗಳನ್ನು ವಿದ್ಯಾರ್ಥಿಗಳಿಗೆ ನೈಜ ಘಟನೆ ಬಗ್ಗೆ ಉದಾರಣೆಯೊಂದಿಗೆ ತಿಳಿಸಿದರು. ವಿದ್ಯಾರ್ಥಿಗಳು ಆಧುನಿಕ ಯುಗದ ಕೆಟ್ಟ ಚಾಳಿಗಳಿಗೆ ಬಲಿಯಾಗದಂತೆ ಜಾಗೃತಗೊಳಿಸುವಂತೆ ಮನವರಿಕೆ ಮಾಡಿದರು.

ಗಾಂಜಾದಿಂದಾಗಿ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಕೊರತೆ ಆಹಾರ ಸೇವನೆ ಕಡಿಮೆ ಆಗುತ್ತಿದೆ ಮೊಬೈಲ್ ಬಳಕೆಯ ಸಾಧಕ ಭಾದಕಗಳನ್ನು ತಿಳಿಸಿದರು ಮುಂದಿನ ಯುವ ಜನಾಂಗವು ದುಶ್ಚಟಗಳಿಗೆ ಬಲಿಯಾಗದಂತೆ ಕಿವಿ ಮಾತನ್ನು ತಿಳಿಸುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಬೋಧಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಮುನಾ ಕೆ ಯಸ್ ರವರು ಕಾರ್ಯಕ್ರಮದ ಬಗ್ಗೆ ಮಾತನಾಡುತ ಯುವಪೀಳಿಗೆ ಜನ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತ ವಯಿಸಬೇಕು,ಎಂದು ತಿಳಿಸುತ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಮಾಜಿ ವಲಯ ಅಧ್ಯಕ್ಷರು ಬದನಾಜೆ ಒಕ್ಕೂಟದ ಅಧ್ಯಕ್ಷರು ಸೇವಾಪ್ರತಿನಿದಿ ಹೇಮಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಮಹಾದೇವ ಶೆಟ್ಟಿ ಬಿ ನಿರೂಪಿಸಿ ಸ್ವಾಗತಿಸಿದರು ಪ್ರಾಥನೆ ಶಾಲಾ ವಿದ್ಯಾರ್ಥಿ ಕುಮಾರಿ ನಿಶ್ಮಿತಾ, ರಶ್ಮಿತಾ ಪ್ರಣಮ್ಯ ಮಾಡಿದರು ಶಾಲಾ ಶಿಕ್ಷಕಿ ಸುಮಂಗಲ ಧನ್ಯವಾದ ನೀಡಿದರು.

Related posts

ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿದ 83 ವರ್ಷದ ಅಜ್ಜಂದಿರು

Suddi Udaya

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಮತ್ತು ಭಂಡಾರಿ ಸಮಾಜ ಸಂಘದ ಸಹಯೋಗದಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಉದ್ಘಾಟನೆ

Suddi Udaya

ಉಜಿರೆ ಬದ್ರಿಯ ಜುಮಾ ಮಸೀದಿಯಲ್ಲಿ ವಿಶ್ವ ಪರಿಸರ ದಿನ

Suddi Udaya

ಕುಕ್ಕೇಡಿ ಗ್ರಾಮ‌ ಪಂಚಾಯತ್ ಗೆ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ

Suddi Udaya

ನಾರಾವಿ ಗ್ರಾ.ಪಂ. ನಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

Suddi Udaya
error: Content is protected !!