ಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಇಲಾಖೆ ಇದರ ಸಹಭಾಗಿತ್ವದಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿ, ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ ನಡೆಯಿತು.
YSKA ಇದರ ಇಂಡಿಯನ್ ಚೀಫ್ ಇನ್ಸ್ಟ್ರಕ್ಟರ್ ಶಾಜು ಮುಲ್ವಾನ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ವರ್ಷಗಳಲ್ಲಿ ಕರಾಟೆ ಒಂದು ಕಲೆಯಾಗಿ ಅಭಿವೃದ್ಧಿ ಹೊಂದಿತು, ಈಗ ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದು ನುಡಿದರು.
ಹೊಸಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜಗದೀಶ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನೀವು ಸಮರ ಕಲೆಗಳನ್ನು ಕಲಿಯಲು ಹಲವಾರು ಕಾರಣಗಳಿವೆ. ನಿಮ್ಮನ್ನು ಅಥವಾ ನಮ್ಮ ದಾಳಿಕೋರರನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಶ್ವರಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕರಾಟೆ ಅಭ್ಯಾಸ ಮಾಡಲು ಫಿಟ್ನೆಸ್ ಎರಡನೇ ಅತಿ ಹೆಚ್ಚು ಕಾರಣ ಇಂದಿರಾಗಾಂಧಿ ಶಾಲೆಗೆ ಮೊದಲ ಬಾರಿ ಬೇಟಿ ನೀಡಿದ್ದೇನೆ, ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶಾಲಾ ಪ್ರಾಂಶುಪಾಲರಿಗೆ ಮತ್ತು ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಜಯ, ಶಿಕ್ಷಣ ಸಂಯೋಜಕರಾದ ಚೇತನಾಕ್ಷಿ ಮತ್ತು ಸಿದ್ಧಲಿಂಗಸ್ವಾಮಿ, ಸೀತಾರಾಮ ರೈ, ಕಾಂತಪ್ಪ, ಪ್ರಕಾಶ್, ಕರುಣಾಕರ ಪೂಜಾರಿ, ಜೋಕಿಮ್ ಪಿಂಟೋ, ಅಶೋಕ್, ಕಿಶೋರ್, ಶ್ರೀಮತಿ ಆರತಿ, ಮಾಧವ ಗೌಡ ಮುಂತಾದವರು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ರೋಟರಿ ಅಧ್ಯಕ್ಷರಾದ ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕರಾಟೆಯಿಂದ ಸ್ವಯಂ ಶಿಸ್ತು, ಗಮನ, ತಾಳ್ಮೆ, ಆತ್ಮ ರಕ್ಷಣೆ ದೈಹಿಕ ಭಾವನಾತ್ಮಕ ಅಭಿವೃದ್ಧಿ ಪಡಿಸುವುದು ಎಂದು ನುಡಿದರು. ನಂತರ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು ಶಾಲಾ ಪ್ರಾoಶುಪಾಲರಾದ ಶೀಧರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸುಧೀರ್ ಬಾಳೆಪುಣಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.