26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಮಡಂತ್ಯಾರು ಪುಂಜಾಲಕಟ್ಟೆ ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

ಬೆಳ್ತಂಗಡಿ: ಆ.8ರಂದು ನಡೆದ ಶ್ರಮದಾನವು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಅಲ್ಲಲ್ಲಿ ಉಂಟಾದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳನ್ನು ಕಲ್ಲು ಮತ್ತು ಜಲ್ಲಿಗಳನ್ನು ಹಾಕಿ ಮುಚ್ಚಲಾಯಿತು. ತಾತ್ಕಾಲಿಕವಾಗಿ ಸಂಚಾರಕ್ಕೆ ಯೋಗ್ಯವೆನಿಸುವಂತಹ ಕಾಮಗಾರಿ ಮಾಡಿದ್ದು ಇದು ಮುಖ್ಯವಾಗಿ ಶಾಲಾ ಮಕ್ಕಳಿಗೆ ಪ್ರಯೋಜನವಾಗಲೆಂದು ಹಮ್ಮಿಕೊಂಡಿರುವ ಶ್ರಮದಾನವು ಆ ಎಲ್ಲಾ ವಾಹನ ಮಾಲಕರಿಗೆ ಮತ್ತು ಚಾಲಕರಿಗೆ ತಕ್ಕಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು.

ಸುಮಾರು ನೂರಕ್ಕೂ ಮಿಕ್ಕಿ ಯುವಕ ಯುವತಿಯರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಪದಾಧಿಕಾರಿಗಳೊಂದಿಗೆ ಹಾಜರಿದ್ದರು. ಹಿರಿಯ ವರ್ತಕರಾದ ವಿಷ್ಣು ದಾಸ್ ಬಾಳಿಗ ರವರು ಹಾರೆಯೊಂದಿಗೆ ಬಂದು ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಮತ್ತು ರೂಪಾಯಿ ಒಂದು ಸಾವಿರ ವನ್ನು ನೀಡಿ ಒಂದು ಪಿಕ್ ಅಪ್ ಜಲ್ಲಿ ತನ್ನದೆಂದು ತಿಳಿಸಿ ಸಹಕರಿಸಿದರು. ಅದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಪಾತಿಲ ರೂ 500 , ರಾಜಶೇಖರ ಶೆಟ್ಟಿ 500 ವಾಹನ ಮಾಲಕರು ರೂ 100 ರಂತೆ ಇಬ್ಬರು ನೀಡಿ ಸಹಕರಿಸಿದರು.

ಸರಕಾರದಲ್ಲಿ ಹಣದ ಕೊರತೆಯಿರುವುದನ್ನು ಗಮನಿಸಿ ಸಾರ್ವಜನಿಕರಲ್ಲಿ ಒಂದು ರೂಪಾಯಿಯಾದರೂ ನೀಡಿ ಎಂದು ಬಟ್ಟೆ ಹಾಕಿ ಶೇಖರಣೆ ಮಾಡಲಾಯಿತು. ಸಾಂಕೇತಿಕವಾಗಿ ಶೇಖರಣೆಯಾದ ಮೊತ್ತವನ್ನು ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಪಾವತಿಸುವುದಾಗಿ ನಿರ್ಣಯಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಸಂಘಟನೆಯ ಮುಖ್ಯಸ್ಥರಿಗೆ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಲಾಯಿತು. ಅದೇ ರೀತಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ, ಉಪಹಾರ ವ್ಯವಸ್ಥೆ ಮಾಡಿದ ಶ್ರೀ ವಿಜಯ ಚಂದ್ರ ಮಾಲಾಡಿಯವರಿಗೆ, ಕೃತಜ್ಞತೆ ಸಲ್ಲಿಸಲಾಯಿತು.

Related posts

ಮೇ 25: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ನುಡಿ ನಮನ : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಭಾಗಿ

Suddi Udaya

ಜೂ. 30ರೊಳಗೆ ಸಂಪೂರ್ಣವಾಗಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿ ತಾ. ಪಂ. ಕಾರ್ಯನಿರ್ವಾಣಾಧಿ ಕಾರಿ ಭವಾನಿ ಶಂಕರ್ ಪ್ರಕಟಣೆ

Suddi Udaya

ನ್ಯಾಯತರ್ಪು: ಕೊರೆಜಂಡ ಮನೆಗೆ ಸಿಡಿಲು ಬಡಿದು ಬಿರುಕು ಬಿಟ್ಟ ಗೋಡೆ,ಕಿತ್ತು ಹೋದ ವಿದ್ಯುತ್ ವಯರಿಂಗ್

Suddi Udaya

ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂವತ್ಸರಗಳ ಸಂಭ್ರಮಾಚರಣೆ:ನೂತನ ರಂಗ ಮಂದಿರ ಲೋಕಾರ್ಪಣೆ, ಸ್ವಾಗತ ದ್ವಾರ ಉದ್ಘಾಟನೆ, ಇಂಟರ್ ಲಾಕ್ ಅಳವಡಿಕೆ ಹಸ್ತಾಂತರ:ಸೇವೆ ಸಲ್ಲಿಸಿದ್ದ ಗುರುಗಳಿಗೆ ಗುರು ವಂದನೆ – ಆಕಷ೯ಕ ಮೆರವಣಿಗೆ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಹಾಗೂ ಮೆಗಾ ಪೋಷಕರ ಸಭೆ

Suddi Udaya
error: Content is protected !!