25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಉಪ ತಹಶೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ಮನವಿ

ಬೆಳ್ತಂಗಡಿ : ಇತ್ತೀಚೆಗೆ ರಾಜ್ಯ ಸರಕಾರ ರಾಮನಗರದ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಖಂಡನೀಯ, ತನ್ನದೇ ಆದ ಇತಿಹಾಸ ಹೊಂದಿರುವ ರಾಮನಗರದ ಹೆಸರನ್ನು ಬದಲಾಯಿಸಬಾರದು. ಬದಲಾವಣೆಯ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು. ಮತ್ತು ರಾಜಧಾನಿಯಲ್ಲಿ ಅಕ್ರಮ ಮಾಂಸ ಸರಬರಾಜು ಆದದ್ದನ್ನು ಖಂಡಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿ ಮಾಡಿದ ರಾಷ್ಟ್ರ ರಕ್ಷಣೆ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಎಸ್. ಪಿ. ಚಂದನ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಹಾಗೂ ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26 ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಹಾಗಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ತಡೆಯಲು ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸುವುದು ಅಪೇಕ್ಷಿತವಿದೆ. ಹಾಗಾಗಿ ಇವೆಲ್ಲವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿಯ ಉಪ ತಹಶೀಲ್ದಾರರಾದ ಸೌ. ಜಯ. ಕೆ ರವರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಉದಯ ಬಿ.ಕೆ ನ್ಯಾಯವಾದಿ ಬೆಳ್ತಂಗಡಿ , ಜಯ ಸಾಲಿಯಾನ್ ಧರ್ಮದರ್ಶಿಗಳು ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಲೆಂಜ, ತಿಮ್ಮಪ್ಪ ಗೌಡ ಬೆಳಾಲು ಉಪಾಧ್ಯಕ್ಷರು ವಿಶ್ವಹಿಂದ್ ಪರಿಷತ್ ಸಂಘಟಕರು ಪುತ್ತೂರು, ಬಾಲಕೃಷ್ಣ ಗೌಡ ಸಂಚಾಲಕರು ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ ರೇಖ್ಯಾ, ವಿಘ್ನೇಶ್ ಆಚಾರ್ಯ ವಿಶ್ವಹಿಂದ್ ಪರಿಷತ್ ನಗರ ಪ್ರಮುಖ್ ಬೆಳ್ತಂಗಡಿ, ವಸಂತ ಬಂಗೇರ ಉಜಿರೆ, ಸದಾಶಿವ ಶೆಟ್ಟಿ ಅಳದಂಗಡಿ, ದಿನೇಶ್ ನಡ, ಪ್ರಸನ್ನ ಬೆಳ್ತಂಗಡಿ, ಹರೀಶ್, ದಾಮೋದರ್ ಪಟ್ಟೂರು, ಯೋಗೀಶ್ ಕೆಂಬರ್ಜೆ ಮತ್ತಿತರರು ಉಪಸ್ಥಿತರಿದ್ದರು.

Related posts

ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

Suddi Udaya

ಉಜಿರೆಯ ರವೀಂದ್ರ ನಾಯಕ್ ನಿಧನ

Suddi Udaya

ಕುದ್ರಡ್ಕ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ – ಯುಕೆಜಿ ತರಗತಿಗಳ ಆರಂಭ

Suddi Udaya

ನಾಳ: ಶ್ರೀವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಸಮೀಕ್ಷೆ, ಕಾಶಿಪಟ್ಣ ಗ್ರಾಮ ಪಂಚಾಯತಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!