26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ದ.ಕ ಜಿಲ್ಲಾ ದ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ದ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ರಿ ಬೆಳ್ತಂಗಡಿ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಕೊಲ್ಪದಬೈಲು ಎಸ್.ಕೆ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಗೆ ಜಿಲ್ಲಾ ಸಂಘದ ಅಧ್ಯಕ್ಷರಾದ ರಾಜಶೇಖರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಯಾದ ಬೆನೆಟ್ ಡಿಸಿಲ್ವಾ, ವಕೀಲರಾದ ಮನೋಹರ್ ಕುಮಾರ್, ಸುಪ್ರೀಂ ಡೆಕೋರಟರ್ಸ್ ನ ಮಾಲಕರು ಅಥಿತಿಗಳಾಗಿ ಆಗಮಿಸಿದ್ದರು. ವೇದಿಕೆಯಲ್ಲಿರುವ ಅಥಿತಿಗಳಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ವೇದಿಕೆಯಲ್ಲಿ ತಾಲೂಕು ಶಾಮಿಯಾನ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ.ಎಚ್, ನಾರಾಯಣ ಗೌಡ, ತಾಲೂಕು ಕ್ರೀಡಾ ಅಧ್ಯಕ್ಷರಾಗಿ ಮಹಮ್ಮದ್ ಸಮೀರ್ ತಾಲೂಕು ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಶಬೀರ್ ಹಾಜರಿದ್ದರು. ಕಾರ್ಯದರ್ಶಿ ವಸಂತ ಇವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮಾತು ಕುಟ್ಟಿ ಲೆಕ್ಕಾಚಾರ ಮಂಡಿಸಿದರು. ಸಂಘದ ಸದಸ್ಯರಿಗೆ ಪೋಸ್ಟಲ್ ಇನ್ಸೂರೆನ್ಸ್ ಮಾಡಲು ಪೋಸ್ಟ್ ಆಫೀಸ್ ನ ಅಧಿಕಾರಿಗಳು ಹಾಜರಿದ್ದರು.

2024-25 ನೇ ಸಾಲಿಗೆ ಹಿಂದಿನ ಸಮಿತಿಯನ್ನು ಮುಂದುವರೆಸಲಾಯಿತು. ಹೊಸದಾಗಿ ಕಾರ್ಯದರ್ಶಿಯಾಗಿ ಅಖಿಲ್ ಮೋಹನ ಆಯ್ಕೆಯಾದರು. ಮಾತು ಕುಟ್ಟಿ ಸ್ವಾಗತ ಕೋರಿದರು, ಉಪಾಧ್ಯಕ್ಷ ಜೋಸೆಫ್ ಕೆ ಡಿ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಡ (ಆಟಿ) ಮೆಗಾ ಡಿಸ್ಕೌಂಟ್ ಸೇಲ್: ಹೊಚ್ಚ ಹೊಸ ಸಂಗ್ರಹದೊಂದಿಗೆ 10% ರಿಂದ 50% ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ಕಡಿರುದ್ಯಾವರದಲ್ಲಿ ಮದುಮಗಳಿಂದ ಮತ ಚಲಾವಣೆ

Suddi Udaya

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್‌ ಭೂಷಣ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಶಾಸಕ ಹರೀಶ್ ಪೂಂಜ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

Suddi Udaya

ಸಿಯೋನ್ ಆಶ್ರಮ: ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಪ್ರಶಾಂತ್ ಶೆಟ್ಟಿ ನೀನಾಸಂ ಭೇಟಿ

Suddi Udaya
error: Content is protected !!