26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಡಂತ್ಯಾರು: ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಕರಾಟೆ ಸ್ಪರ್ಧೆಯು ಆಗಸ್ಟ್ 5ರಂದು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 17ರ ವಯೋಮಾನದ 9ನೇ ತರಗತಿಯ ವಿದ್ಯಾರ್ಥಿಯಾದ ಫ್ಲಾಯಿಡ್ ಮಿಸ್ಕಿತ್ ರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 9ನೇ ತರಗತಿಯ ಮಹಮ್ಮದ್ ಹಾಫಿಲ್, 8ನೇ ತರಗತಿಯ ಶೇಕ್ ಮಹಮ್ಮದ್ ಅಮಾನ್ ರವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 7ನೇ ತರಗತಿಯ ವಿದ್ಯಾರ್ಥಿನಿಯಾದ ರಿತ ಕೆ, 6ನೇ ತರಗತಿಯ ವಿದ್ಯಾರ್ಥಿಯಾದ ರಿಷಿತ್, 10ನೇ ತರಗತಿಯ ವಿದ್ಯಾರ್ಥಿಯಾದ ಶ್ರೇಯಸ್ ಎಮ್ ರವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇವರಿಗೆ ಕರಾಟೆ ತರಬೇತುದಾರರಾದ ವಸಂತ ಬಂಗೇರರವರು ತರಬೇತಿಯನ್ನು ನೀಡಿರುತ್ತಾರೆ .ಹಾಗೂ ನಮ್ಮ ಶಾಲಾ ದೈಹಿಕ ಶಿಕ್ಷಕರಾದ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ಸಹಕಾರ ನೀಡಿರುತ್ತಾರೆ.

Related posts

ಕಾಜೂರು ಮಖಾಂ ಉರೂಸ್‌ಗೆ ಸಂಭ್ರಮದ ಚಾಲನೆ: ಆಧ್ಯಾತ್ಮಿಕ ಚೌಕಟ್ಟು ಮೀರಿ ಬದುಕುವವರಿಂದ ಸಮಾಜಕ್ಕೆ ಅಪಾಯ: ಕಾಜೂರು ತಂಙಳ್

Suddi Udaya

ಎರ್ಡೂರು ನಿರಂಜನ್ ರಾವ್ ನಿಧನ

Suddi Udaya

ಇಂದಬೆಟ್ಟು: ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

Suddi Udaya

ಕುಸ್ತಿ ಪಂದ್ಯಾಟ: ಮಚ್ಚಿನದ ಗಗನ್ ಸಿ.ಶೆಟ್ಟಿಯವರಿಗೆ ಶ್ರೀ ವೀರಭದ್ರ ಕೇಸರಿ ಪ್ರಶಸ್ತಿ

Suddi Udaya

ಪುಂಜಾಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗಳ ಅನಾವರಣ

Suddi Udaya
error: Content is protected !!